National News – ಕೋವಿಡ್ ಆಸ್ಪತ್ರೆಗೆ ಬೆಂಕಿ ಮಹಿಳೆ ಸಾವು…
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬುರ್ದ್ವಾನ್ನಲ್ಲಿರುವ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. Covid-19 patient killed as fire breaks out in hospital in Bengal
ಮೃತಪಟ್ಟವರನ್ನ ಬುರ್ದ್ವಾನ್ ಜಿಲ್ಲೆಯ ನಿವಾಸಿ ಸಂಧ್ಯಾ ರಾಣಿ ಮೊಂಡೋಲ್ ಎಂದು ಗುರುತಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲು ಆಸ್ಪತ್ರೆಯ ಅಧಿಕಾರಿಗಳು ಐವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
ಸೊಳ್ಳೆ ಕಾಯಿಲ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಸಾಮಾನ್ಯ ವಾರ್ಡ್ನಲ್ಲಿ ಕೋವಿಡ್ -19 ಚಿಕಿತ್ಸೆಯಲ್ಲಿದ್ದ ಇತರ ಮೂವರು ರೋಗಿಗಳನ್ನು ರಕ್ಷಿಸಲಾಗಿದೆ.
“ಬೆಳಿಗ್ಗೆ 5 ಗಂಟೆ ಸುಮಾರಿಗೆ ವಾರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಜನರಲ್ ವಾರ್ಡ್ನಲ್ಲಿ ನಾಲ್ವರು ರೋಗಿಗಳಿದ್ದರು. ನಾವು ಮೂವರು ರೋಗಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರೂ, ಒಬ್ಬರು ಸಾವನ್ನಪ್ಪಿದರು. ಕೇವಲ ಒಂದು ಬೆಡ್ಗೆ ಬೆಂಕಿ ತಗುಲಿದೆ ಎಂದು ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮತ್ತು ಉಪ ಪ್ರಾಂಶುಪಾಲ ಡಾ ತಪಸ್ ಘೋಷ್ ಹೇಳಿದ್ದಾರೆ.
ಕೋವಿಡ್ -19 ರೋಗಿಯ ಸಂಬಂಧಿಯೊಬ್ಬರು ಮೊದಲು ಬೆಂಕಿ ಗುರುತಿಸಿ ಎಚ್ಚರಿಕೆ ನೀಡಿದರು. ಆಸ್ಪತ್ರೆಯ ಸಿಬ್ಬಂದಿ ಮೂವರು ರೋಗಿಗಳನ್ನು ರಕ್ಷಿಸಿ ಬೆಂಕಿಯನ್ನು ನಂದಿಸಿದ್ದಾರೆ, ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವ ಮೊದಲೇ ಬೆಂಕಿ ನಂದಿಸಲಾಗಿತ್ತು.
ಶುಕ್ರವಾರ, ಪಶ್ಚಿಮ ಬಂಗಾಳದಲ್ಲಿ 3,805 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 45,729 ಕ್ಕೆ ತೆಗೆದುಕೊಂಡಿದೆ. ಗುರುವಾರ ಕನಿಷ್ಠ 34 ರೋಗಿಗಳು ಸಾವನ್ನಪ್ಪಿದ್ದಾರೆ.