COVID-19 UPDATE : ರಾಜ್ಯದಲ್ಲಿ ಇಂದು 8906 ಕೇಸ್ ಪತ್ತೆ, ಬೆಂಗಳೂರಿನಲ್ಲಿ 7113 ಕೇಸ್ covid-19-update-covid 19 cases in karnataka today saaksha tv
ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದೆ.
ಇಂದು ರಾಜ್ಯದಾದ್ಯಂತ 8906 ಕೇಸ್ ಗಳು ಪತ್ತೆಯಾಗಿವೆ. ನಾಲ್ಕು ಮಂದಿ ಹೆಮ್ಮಾರಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡಾ 5.42ಕ್ಕೆ ಏರಿಕೆಯಾಗಿದೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗಿದೆ.
ಇಂದು ಬೆಂಗಳೂರಿನಲ್ಲಿ 7113 ಕೇಸ್ ಗಳು ಪತ್ತೆಯಾಗಿವೆ. ನಗರದಲ್ಲಿ ಮೂವರು ಸಾವನಪ್ಪಿದ್ದಾರೆ.
ನಗರದಲ್ಲಿ ಪಾಸಿಟಿವಿಟಿ ದರ ಶೇಕಡಾ 10ಕ್ಕೆ ಬಂದು ನಿಂತಿದೆ.
ಇಂದಿನ ಕೊರೊನಾ ಸೋಂಕು ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಸಕ್ರಿಯ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ 38507 ತಲುಪಿದೆ.
ಇಂದು 508 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.









