COVID-19 UPDATE : ರಾಜ್ಯದಲ್ಲಿ ಇಂದು 12 ಸಾವಿರ.. ಬೆಂಗಳೂರಲ್ಲಿ 9 ಸಾವಿರ ಕೇಸ್ ಪತ್ತೆ covid-19-update-covid 19 cases in karnataka today
ಬೆಂಗಳೂರು : ರಾಜ್ಯದಲ್ಲಿ ಕೊರೊನಾಸುರ ಇಂದು ಅಕ್ಷಶಃ ಅಬ್ಬರಿಸಿದ್ದಾರೆ. ರಾಜ್ಯದಲ್ಲಿ ಇಂದು ಬರೋಬ್ಬರಿ 12 ಸಾವಿರ ಕೊರೊನಾ ಕೇಸ್ ಗಳು ಪತ್ತೆಯಾಗಿವೆ.
ಇದೇ ಅವಧಿಯಲ್ಲಿ ನಾಲ್ಕು ಮಂದಿ ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಶೇಕಡಾ 6.33ಕ್ಕೆ ಏರಿಕೆಯಾಗಿದೆ.
Cases go up to 12k in Karnataka today:
◾New cases in State: 12,000
◾New cases in B'lore: 9,020
◾Positivity rate in State: 6.33%
◾Discharges: 901
◾Active cases State: 49,602 (B'lore- 40k)
◾Deaths:04 (B'lore- 02)
◾Tests: 1,89,499#COVID19 #Omicron #Karnataka #Bangalore— Dr Sudhakar K (@DrSudhakar_) January 9, 2022
ರಾಜ್ಯದಲ್ಲಿ ಇಂದು 901 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 49,603 ಕೇಸ್ ಗಳು ರಾಜ್ಯದಲ್ಲಿ ಸಕ್ರಿಯವಾಗಿವೆ.
ಇತ್ತ ಬೆಂಗಳೂರಿನಲ್ಲಿ ಇಂದು 9020 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಇಬ್ಬರು ಹೆಮ್ಮಾರಿ ಸೋಂಕಿಗೆ ಬಲಿಯಾಗಿದ್ದಾರೆ.









