ಬೆಂಗಳೂರಲ್ಲಿ ಕೊರೊನಾ ಸ್ಫೋಟ : ಕೋವಿಡ್ ಕೇರ್ ಸೆಂಟರ್ ರೀ ಓಪನ್
ಬೆಂಗಳೂರು : ನಗರದಲ್ಲಿ ಕೊರೊನಾ ವೈರಸ್ ಮತ್ತೆ ಆರ್ಭಟಿಸುತ್ತಿರುವ ಹಿನ್ನೆಲೆ ಕೋರಮಂಗಲದ ಇಂಡೋರ್ ಸ್ಟೇಡಿಯಂ ನಲ್ಲಿರುವ ಕೋವಿಡ್ ಕೇರ್ ಸೆಂಟರ್ ರೀ ಓಪನ್ ಮಾಡುವುದಾಗಿ ಪಾಲಿಕೆ ಜಂಟಿ ಆಯುಕ್ತ ವೀರಭದ್ರಪ್ಪ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ರಾಜ್ಯದಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ.
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆ 250 ಹಾಸಿಗಳುಳ್ಳ ಕೋವಿಡ್ ಕೇರ್ ಸೆಂಟರನ್ನ ರೀ ಓಪನ್ ಮಾಡಲು ಪಾಲಿಕೆ ನಿರ್ಧರಿಸಿದೆ.
ಈ ಕೋವಿಡ್ ಕೇರ್ ಸೆಂಟರ್ ಅನ್ನ ಕಳೆದ ವರ್ಷ ನಿರ್ಮಾಣ ಮಾಡಲಾಗಿತ್ತು. ಸೋಂಕಿತರ ಸಂಖ್ಯೆ ಇಳಿಮುಖ ಆಗಿದ್ದ ಕಾರಣ ಮುಚ್ಚಲಾಗಿತ್ತು.
ಇದೀಗ ಮತ್ತೆ ಕೊರೊನಾ ಅಬ್ಬರ ಜೋರಾದ ಹಿನ್ನೆಲೆ ಕೇರ್ ಸೆಂಟರ್ ರೀ ಓಪನ್ ಗೆ ಪಾಲಿಕೆ ತೀರ್ಮಾನ ಮಾಡಿದೆ.