ಚೀನಾದಲ್ಲಿ ಕೋವಿಡ್ ಹೆಚ್ಚಳ – ಏಷ್ಯಾನ್ಸ್ ಗೇಮ್ಸ್ 2022 ಮುಂದೂಡಿಕೆ….
ಚೀನಾದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಕಾರಣಗಳಿಂದ ಹ್ಯಾಂಗ್‌ಝೌನಲ್ಲಿ ನಡೆಯಬೇಕಿದ್ದ ಏಷ್ಯಾನ್ಸ್ ಗೇಮ್ಸ್ 2022 ರನ್ನ ಮುಂದೂಡಲಾಗಿದೆ ಎಂದು ಏಷ್ಯಾದ ಒಲಿಂಪಿಕ್ ಕೌನ್ಸಿಲ್ (OCA) ತಿಳಿಸಿದೆ.
ಪ್ರಸ್ತುತ ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಏಷ್ಯಾದ ಒಲಿಂಪಿಕ್ ಕೌನ್ಸಿಲ್ ಈ ನಿರ್ಧಾರವನ್ನು ತೆಗೆದುಕೊಂಡಿತು, ಡೈರೆಕ್ಟರ್ ಜನರಲ್ ಹುಸೇನ್ ಅಲ್ ಮುಸಲ್ಲಮ್ ಮತ್ತು ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್ ಸಭೆಯಲ್ಲಿ ಉಪಸ್ಥಿತರಿದ್ದರು.
ಚೀನಾದ ಹಲವಾರು ಪ್ರಾಂತ್ಯಗಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ಕಾರಣ ನಿರ್ಧಾರಕ್ಕೆ ಬರಲಾಗಿದೆ. ಶೀಘ್ರದಲ್ಲೇ ಹೊಸ ದಿನಾಂಕವನ್ನ ಘೋಷಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. 2020 ರ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನೂ ಸಹ ಕೋವಿಡ್ -19 ಕಾರಣಕ್ಕಾಗಿ ಒಂದು ವರ್ಷ ಮುಂದೂಡಲಾಗಿತ್ತು. ಮತ್ತು 2021 ರಲ್ಲಿ ನಡೆಸಲಾಗಿತ್ತು.
“ಚೀನೀ ಒಲಿಂಪಿಕ್ ಸಮಿತಿ ಮತ್ತು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಆಯೋಜಕ ಸಮಿತಿ ಜೊತೆಗಿನ ಮಾತುಕತೆಯ ಬಳಿಕ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಬೇಕಿದ್ದ 19 ನೇ ಏಷ್ಯನ್ ಗೇಮ್ಸ್ ಅನ್ನು ಮುಂದೂಡಲು ಏಷ್ಯಾನ್ ಒಲಂಪಿಕ್ ಕೌನ್ಸಿಲ್ ನಿರ್ಧರಿಸಿದೆ. ಶಾಂಘೈನಿಂದ 175 ಕಿ.ಮೀ ದೂರದಲ್ಲಿರುವ ಝೆಜಿಯಾಂಗ್ ಪ್ರಾಂತ್ಯದ ರಾಜಧಾನಿಯಲ್ಲಿ ಸೆಪ್ಟೆಂಬರ್ 10 ರಿಂದ 25ರವರೆಗೂ ಕ್ರೀಡಾಕೂಟಗಳು ನಡೆಯಬೇಕಿತ್ತು.