ಸರಕಾರಿ ಶಾಲೆಯ 17 ಮಕ್ಕಳಿಗೆ ಕೋವಿಡ್ ಪಾಸಿಟಿವ್!!

1 min read
Government School Saaksha tv

ಸರಕಾರಿ ಶಾಲೆಯ 17 ಮಕ್ಕಳಿಗೆ ಕೋವಿಡ್ ಪಾಸಿಟಿವ್!!

ಮಂಡ್ಯ: ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಭೀತಿಯ ನಡುವಲ್ಲೆ ಇದೀಗ ಮಂಡ್ಯದ ಮಾಕವಳ್ಳಿ ಗ್ರಾಮದಲ್ಲಿ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ  17 ಮಕ್ಕಳಿಗೆ ಕೊರೋನಾ ಪಾಸಿಟಿವ ಬಂದಿದೆ.

ನಿನ್ನೆ ರಾಜ್ಯಾದ್ಯಂತ ಕೋವಿಡ್ ಲಸಿಕೆ ಪ್ರಾರಂಭಿಸಲಾಗಿತ್ತು. ಇದರ ನಿಮಿತ್ತ ಕೆ‌ಆರ್‌ಪೇಟೆ ತಾಲೂಕಿನ ಮಾಕವಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ ಲಸಿಕೆ ನೀಡಲಾಗಿತ್ತು. ಈ ಸಮಯದಲ್ಲಿ‌ ಅಧಿಕಾರಿಗಳು ಮಕ್ಕಳಿಗೆ ಕೊರೋನಾ ಟೆಸ್ಟ್ ಮಾಡಿಸಿದಾಗ 17 ಮಕ್ಕಳಿಗೆ ಪಾಸಿಟಿವ್ ಇರೊದು ಧೃಡವಾಗಿದೆ.

ಪಾಸಿಟಿವ್ ಬಂದ ಮಕ್ಕಳನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸುತ್ತಲಿನ ಗ್ರಾಮಗಳಲ್ಲಿ ಮತ್ತು ಶಾಲೆಯ ಇತರ ಮಕ್ಕಳ ಪೋಷಕರಲ್ಲಿ  ಆಂತಕ ಮನೆಮಾಡಿದ್ದು ಮಕ್ಕಳನ್ನು ಕ್ವಾರಂಟೈನ್ ಮಾಡಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd