ಹುಬ್ಬಳ್ಳಿಯ 4 ಶಾಲೆಗಳಲ್ಲಿ ಕೋವಿಡ್ ಪಾಸಿಟಿವ್

1 min read
Hubballi Saaksha Tv

ಹುಬ್ಬಳ್ಳಿಯ 4 ಶಾಲೆಗಳಲ್ಲಿ ಕೋವಿಡ್ ಪಾಸಿಟೀವ್

ಹುಬ್ಬಳ್ಳಿ:  ವಾಣಿಜ್ಯ ನಗರಿಯ ನಾಲ್ಕು ಶಾಲೆಯಲ್ಲಿ ಶಿಕ್ಷಕರು ಮತ್ತು ಮಕ್ಕಳು ಸೇರಿ 21 ಜನರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನಲೆ ನಾಲ್ಕು ಶಾಲೆಗಳನ್ನು ಬಂದ್ ಮಾಡಲಾಗಿದೆ. ಪಾಸಿಟಿವ್ ಬಂದವರಲ್ಲಿ ನಾಲ್ವರು ಶಿಕ್ಷಕರಿದ್ದು, ಸೋಂಕಿತರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

Omicron cases Saaksha TV

ಒಂದು ಶಾಲೆಯಲ್ಲಿ 10 ಪ್ರಕರಣಗಳು, ಇನ್ನೊಂದರಲ್ಲಿ 8, ಮತ್ತೊಂದರಲ್ಲಿ 2 ಹಾಗೂ ಮಗದೊಂದರಲ್ಲಿ 1 ಪ್ರಕರಣ ಪತ್ತೆಯಾಗಿದೆ. ಸೋಂಕಿತ ಯಾರಲ್ಲಿಯೂ ತೀವ್ರ ತರವಾದ ಲಕ್ಷಣ ಕಂಡು ಬಂದಿಲ್ಲ. ಮುಂದಿನ ಆದೇಶದವರೆಗೂ ನಾಲ್ಕು ಶಾಲೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಕೊರೊನಾ ದೃಢಪಟ್ಟವರ ಸಂಪರ್ಕಕ್ಕೆ ಬಂದಿರುವವರನ್ನು ಗುರುತಿಸಿ ಟೆಸ್ಟ್ ಮಾಡಲಾಗುತ್ತಿದೆ‌. ಜೊತೆಗೆ ಆಯಾ ಶಾಲೆಗಳಲ್ಲಿ ಸ್ಯಾನಿಟೈಸ್​​ ಸೇರಿದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಸೂಚನೆಯಂತೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd