ಕೋವಿಡ್ ಸಂಕಷ್ಟ – ಬ್ರಿಟನ್ ಪ್ರವಾಸ ರದ್ದುಗೊಳಿಸಿದ ಮೋದಿ
ನವದೆಹಲಿ: ದೇಶದಲ್ಲಿ ಕೋವಿಡ್ 2ನೇ ಅಲೆ ತಾಂಡವವಾಡ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ.. ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನೇ ದಿನೇ ಸೋಂಕಿತರು ಸಾವಿನ ಸಂಖ್ಯೆಗಳು ಹೆಚ್ಚಾಗ್ತಲೇ ಇದ್ದು, 2ನೇ ಅಲೆ ಭೀಕರತೆಯನ್ನ ತಡೆದುಕೊಳ್ಳುವ ಶಕ್ತಿ ಇಲ್ಲದಂತಾಗಿದೆ.. ಈ ನಡುವೆ 3ನೇ ಅಲೆಯ ಗಂಡಾಂತರವೂ ಭಾರತಕ್ಕೆ ಕಾದಿದ್ದು, 3ನೇ ಅಲೆಯ ಟಾರ್ಗೆಟ್ ಮಕ್ಕಳೇ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಆಕ್ಸಿಜನ್ ಕೊರತೆಯಿಂದಾಗಿ ಸೋಂಕಿತರು ಪರದಾಡ್ತಿದ್ಧಾರೆ.. ಆದ್ರೆ ಕೇಂದ್ರ ಸರ್ಕಾರ ಈ ಬಗ್ಗೆ ತಲೆ ಕಡೆಸಿಕೊಳ್ತಿಲ್ಲ ಎಂದು ವಿಪಕ್ಷ ನಾಯಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಗೆ ತೆರಳಬೇಕಾಗಿದ್ದ ಪ್ರಧಾನಿ ಮೋದಿ ಕೊರೋನಾ ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಪ್ರವಾಸ ರದ್ದು ಮಾಡಿದ್ದಾರೆ. ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಿರುವ ಹಿನ್ನಲೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿ7 ಶೃಂಗ ಸಭೆಯಲ್ಲಿ ಪ್ರಧಾನಿ ಭಾಗವಹಿಸುತ್ತಿಲ್ಲ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಖುದ್ದಾಗಿ ಮೋದಿಗೆ ಆಹ್ವಾನ ನೀಡಿದ್ದರು.
ಆದರೆ ಪ್ರಸಕ್ತ ಸನ್ನಿವೇಶದ ಹಿನ್ನಲೆಯಲ್ಲಿ ಪ್ರಧಾನಿ ಖುದ್ದಾಗಿ ಬ್ರಿಟನ್ ಗೆ ಭೇಟಿ ನೀಡಿ ಶೃಂಗದಲ್ಲಿ ಪಾಲ್ಗೊಳ್ಳಲಾಗದು ಎಂದು ಪ್ರಧಾನಿ ಕಾರ್ಯಾಲಯ ಪ್ರಕಟಣೆ ತಿಳಿಸಿದೆ. ಬದಲಾಗಿ ಆನ್ ಲೈನ್ ಮೂಲಕ ಸಮಾವೇಶದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.