ಕೊರೊನಾ ಸಂಕಷ್ಟ : ರಾಗಿಣಿ ಬಳಿಕ ಜನರ ಸಹಾಯಕ್ಕೆ ಧಾವಿಸಿದ ಸಂಜನಾ ಗಲ್ರಾನಿ
ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ವಾಸ ಅನುಭವಿಸಿ ಬಳಿಕ ಜಾಮೀನಿನ ಮೇಲೆ ಹೊರಗಿರುವ ನಟಿ ಸಂಜನಾ ಗಲ್ರಾನಿ ಇದೀಗ ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅಂದ್ಹಾಗೆ ರಾಗಿಣಿ ಜೊತೆಯೇ ಜೈಲು ಸೇರಿದ್ದ ರಾಗಿಣಿ ದ್ವಿವೇದಿ ಸಹ ಜಾಮೀನಿನ ಮೇಲೆ ಹೊರಬಂದಿದ್ದು, ಅವರು ಸಹ ಕೋವಿಡ್ ಸಂಕಷ್ಟದ ಸಮಯದಲ್ಲಿ ಬಡವರಿಗೆ ನೆರವಾಗಿದ್ದಾರೆ.. ಇತ್ತೀಚೆಗೆ ಬಡವರಿಗೆ ದಿನಸಿ , ಆಹಾರ ವಿತರಣೆ ಮಾಡಿದ್ದರು..
ಇದೀಗ ಸಂಜನಾ ಗಲ್ರಾನಿ ಸಹ ರಾಗಿಣಿ ಹಾದಿಯನ್ನೇ ಹಿಡಿದಿದ್ದಾರೆ. ಬಡವರಿಗೆ ಗಲ್ರಾನಿ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ನಟಿ ಸಂಜನಾ, ‘ಈ ಸಮಯದಲ್ಲಿ ಬಹಳ ಮೊದಲ ಅಗತ್ಯವಾಗಿರುವ ಬೆಡ್ ಹಾಗೂ ಆಮ್ಲಜನಕದ ವ್ಯವಸ್ಥೆ ಮಾಡುವ ದಾರಿ ನನಗೆ ಗೊತ್ತಿಲ್ಲ. ಹಾಗಾಗಿ ಈ ಲಾಕ್‌ಡೌನ್ ಅವಧಿಯಲ್ಲಿ ಹಸಿವು ಹೋಗಲಾಡಿಸುವ ಕಾರ್ಯಕ್ಕೆ ಮುಂದಾಗಿದ್ದೇನೆ’ ಎಂದಿದ್ದಾರೆ.
ಉಚಿತವಾಗಿ ದಿನಸಿ ವಿತರಿಸುವ ಕಾರ್ಯ ಮಾಡುತ್ತಿರುವುದಾಗಿ ಹೇಳಿದ ಸಂಜನಾ ತಾವು ವಿತರಣೆ ಮಾಡಲು ತಯಾರು ಮಾಡಿಟ್ಟುಕೊಂಡಿರುವ ದೊಡ್ಡ ದಿನಸಿ ಪ್ಯಾಕೆಟ್‌ಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. 5 KG ಅಕ್ಕಿ, 2 KG ಕೇಜಿ ಮೈದಾ, 1 ಲೀಟರ್ ಅಡುಗೆ ಎಣ್ಣೆ, 1 KG ಸಕ್ಕರೆ, 2 KG ಬೇಳೆಯಿರುವ ದಿನಸಿ ಕಿಟ್ ನೀಡ್ತಿದ್ದಾರೆ. ಸಂಜನಾ ಗಲ್ರಾನಿ ಫೌಂಡೇಶನ್ ವತಿಯಿಂದ ಈ ಕಾರ್ಯ ಮಾಡುತ್ತಿದ್ದು, ನನ್ನ ಈ ಕಾರ್ಯಕ್ಕೆ ನನ್ನ ಕುಟುಂಬದವರು ಸಹ ಜೊತೆ ನಿಂತಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳಲೇಬೇಕು ಎಂದು ಸಂಜನಾ ಹೇಳಿದ್ದಾರೆ.
ನಾವು ಯಾರಿಗೆ ಈ ಕಿಟ್‌ಗಳನ್ನು ನೀಡಬೇಕು ಎಂದು ಈಗಾಗಲೇ ಪಟ್ಟಿ ಮಾಡಿಕೊಂಡಿದ್ದೇವೆ. ನಾವೇ ಖುದ್ದಾಗಿ ಮನೆಗಳಿಗೆ ಭೇಟಿ ನೀಡಿ ಅವರ ಪರಿಸ್ಥಿತಿ ಅರಿತು ಯಾರಿಗೆ ದಿನಸಿ ಕಿಟ್‌ನ ಅವಶ್ಯಕತೆ ಇದೆ, ಯಾರಿಗೆ ಇಲ್ಲ ಎಂಬುದನ್ನು ನಿರ್ಧರಿಸಿ ಅವಶ್ಯಕತೆ ಇದ್ದವರಿಗೆ ಮಾತ್ರವೇ ಕಿಟ್ ನೀಡುತ್ತಿದ್ದೇವೆ ಎಂದಿದ್ದಾರೆ.
ದೇಶದಲ್ಲಿ ಕೋವಿಡ್ 2ನೇ ಅಲೆ ತಾಂಡವವಾಡ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ.. ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.. ಸ್ಯಾಂಡಲ್ ವುಡ್ , ಬಾಲಿವುಡ್ , ಕಾಲಿವುಡ್ , ಟಾಲಿವುಡ್ ನ ತಾರೆಯರು ಜನರಿಗೆ ನೆರವಾಗಿದ್ದಾರೆ.. ಸೋನು ಸೂದ್ , ಸಲ್ಮಾನ್ ಖಾನ್ , ಉಪೇಂದ್ರ , ಸುದೀಪ್ ಶ್ರೀಮುರುಳಿ, ಶೋಭರಾಜ್ , ಸಾಧುಕೋಕಿಲ ಸೇರಿದಂತೆ ಹಲವರು ಸಂಕಷ್ದ ಸಮಯದಲ್ಲಿ ಸಹಾಯಾಸ್ತ ಚಾಚಿದ್ದಾರೆ..
https://www.instagram.com/p/COqRSpCpdwU/
https://www.instagram.com/p/COqRSpCpdwU/








