ಕೋವಿಡ್ ಅಪ್ಡೇಟ್ – ದೇಶಾದ್ಯಂತ 3,157 ಸೋಂಕು ಪತ್ತೆ, 1% ಮೀರಿದ ಪಾಸಿಟಿವಿಟಿ ದರ
ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ 3,157 ಸೋಂಕುಗಳು ಪತ್ತೆಯಾಗಿದ್ದು ಸಾವಿನ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಎರಡು ತಿಂಗಳ ನಂತರ ಭಾರತದ ಕೋವಿಡ್ ಪ್ರಕರಣದ ದೈನಂದಿನ ಪಾಸಿಟಿವಿಟಿ ದರವು ಮತ್ತೆ ಶೇಕಡಾ ಒಂದನ್ನು ಮೀರಿದೆ.
ಸೋಮವಾರದ ವರದಿಯ ನಂತರ ದೇಶದ ಒಟ್ಟಾರೆ ಕೋವಿಡ್ ಸೋಂಕಿನ ಸಂಖ್ಯೆ 4,30,82,345 ಪ್ರಕರಣಗಳಿಗೆ ಮತ್ತು 5,23,869 ಸಾವುಗಳಿಗೆ ಏರಿಕೆಯಾಗಿದೆ.
24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 408 ರಷ್ಟು ಏರಿಕೆಯಾಗಿ 19,500 ಕ್ಕೆ ತಲುಪಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತೋರಿಸಿದೆ.
ಎರಡು ತಿಂಗಳ ಬಳಿಕ ದೈನಂದಿನ ಪಾಸಿಟಿವಿಟಿ ದರ 1.07 % ತಲುಪಿದೆ. Covid Update – 3,157 infections detected nationwide, with daily positivity rate exceeding 1%








