Covid Update – ಕಳೆದ 24 ಗಂಟೆಗಳಲ್ಲಿ 18,257 ಹೊಸ ಪ್ರಕರಣ ಪತ್ತೆ…
ದೇಶದಲ್ಲಿ ಸಕ್ರಿಯ ಕರೋನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಮತ್ತೊಮ್ಮೆ ಜನರನ್ನ ಆತಂಕಕ್ಕೆ ದೂಡಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಭಾನುವಾರ (ಜುಲೈ 10) ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ 1,28,690 ಕ್ಕೆ ತಲುಪಿದೆ. ನಿನ್ನೆಗಿಂತ 3 ಸಾವಿರ ಸೋಂಕಿತರು ಹೆಚ್ಚಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 18,257 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. 42 ರೋಗಿಗಳು ನಿನ್ನೆ ದಿನ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕತೆ ಪ್ರಾರಂಭವಾದಾಗಿನಿಂದ ಒಟ್ಟು 5,25,428 ಜನರು ಸಾವನ್ನಪ್ಪಿದ್ದಾರೆ.
ಕಳೆದ 24 ಗಂಟೆಗಳಲ್ಲಿ 16 ಸಾವಿರದ 104 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 4 ಕೋಟಿಯ 29 ಲಕ್ಷದ 53 ಸಾವಿರದ 980 ಮಂದಿ ಗುಣಮುಖ ಹೊಂದಿ ಬಿಡುಗಡೆಯಾಗಿದ್ದಾರೆ. ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾದ ನಂತರ ಇಲ್ಲಿಯವರೆಗೆ 198.65 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ.
Covid19 Cases India Today