ಬೆಳಗಾವಿ : ಕೋವಿಡ್ ಲಸಿಕೆ ಪಡೆದ 9 ಗಂಟೆಯೊಳಗೆ ವೃದ್ಧ ಸಾವು
ಬೆಳಗಾವಿ: ವ್ಯಕ್ತಿಯೊಬ್ಬರಿಗೆ ಕೊರೊನಾ ಲಸಿಕೆ ನೀಡಿದ 9 ಗಂಟೆಯಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. 69 ವರ್ಷದ ವೃದ್ಧರು ಕೊರೊನಾ ಲಸಿಕೆ ಪಡೆದ 9 ಗಂಟೆಯೊಳಗೇ ಸಾವನಪ್ಪಿದ್ದಾರೆ. ಇನ್ನೂ ಆಘಾತಕಾರಿ ವಿಚಾರ ವೆಂದರೆ ಜಿಲ್ಲೆಯಲ್ಲಿ ಲಸಿಕೆ ಪಡೆದ ಬಳಿಕ ಮೃತಪಟ್ಟ 7ನೇ ಪ್ರಕರಣ ಇದಾಗಿದೆ.
ಕಾಕತಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಮೃತ ವ್ಯಕ್ತಿ ಕಾಕತಿಯಲ್ಲಿ ಮಾರ್ಚ್ 15 ರಂದು ಕೊರೊನಾ ಲಸಿಕೆ ಪಡೆದುಕೊಂಡಿದ್ದರು. ಆದ್ರೆ ರಾತ್ರಿ 11.30ರ ಸುಮಾರಿಗೆ ಅವರಿಗೆ ಹೊಟ್ಟೆನೋವು, ಸಂವೇದನೆ, ಎದೆಯಲ್ಲಿ ನೋವಿನಂತಹ ಲಕ್ಷಣಗಳು ಕಂಡುಬಂದಿದೆ. ಮಾರ್ಚ್ 16ರ ಬೆಳಿಗ್ಗೆ ವ್ಯಕ್ತಿ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ ಮೃತ ವ್ಯಕ್ತಿ ಮದ್ಯವ್ಯಸನಿಯಾಗಿದ್ದರಂತೆ. ಅಲ್ದೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಕುಟುಂಬಸ್ಥರು ನಿರಾಕರಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಇದೊಂದು ಸಹಜ ಸಾವು ಲಸಿಕೆಯ ಪರಿಣಾಮ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರಪ್ರದೇಶ : ಬಸ್ ಅಪಘಾತ – 14 ಜನರಿಗೆ ಗಂಭೀರ ಗಾಯ
ಭಾರತದಲ್ಲಿ ಸ್ಥಿರತೆ ಕಾಯ್ದಕೊಂಡಿರುವ ಇಂಧನ ಬೆಲೆ : ಇಳಿಕೆಯೂ ಇಲ್ಲ, ಏರಿಕೆಯೂ ಇಲ್ಲ..!
ಸಚಿವ ಸುಧಾಕರ್ ಮನೆ ಮುಂದೆಯೇ ಹೊಡೆದಾಡಿಕೊಂಡ ಡ್ರೈವರ್ – ಗನ್ ಮ್ಯಾನ್..!