ಕೋವಿಡ್ 3ನೇ ಅಲೆ ಭೀತಿ : 12 -18 ವರ್ಷದ ಮಕ್ಕಳಿಗೆ ಲಸಿಕೆ..!
ನವದೆಹಲಿ : ದೇಶದಲ್ಲಿ ಕೊರೊನಾ ಹಾವಳಿಯಿಂದಾಗಿ ಈಗಾಗಲೇ ಸಾವಿರಾರು ಜನರು ಪ್ರಾಣಂ ಕಲೆದುಕೊಂಡಿದ್ದಾರೆ.. ಇನ್ನೂ ಹಲವರು ಕುಟುಂಬಸ್ಥರು ಆಪ್ತರನ್ನ ಕಲೆದುಕೊಂಡಿದ್ರೆ , ಅನೇಕ ಕುಟುಂಬಗಳು ಬೀದಿಗೆ ಬಂದಿವೆ ಮಕ್ಕಳು ಅನಾಥರಾಗಿರುವ ಮನಕಲಕುವಂತಹ ಘಟನೆಗಳು ನಡೆದಿದ್ದು, ಕೊರೊನಾ 2ನೇ ಹಾವಳಿ ತೆಡೆಗೆ ಬಹುತೇಕ ಕರ್ನಾಟಕ , ಮಹಾರಾಷ್ಟ್ರ , ದೆಹಲಿ ಸೇರಿ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಿತ್ತು..
ಇದೀಗ ಕೊರೊನಾ 2ಅನೇ ಅಲೆ ಇಳಿಮುಖವಾಗ್ತಿರೋ ಬೆನ್ನಲ್ಲೇ ಕೋವಿಡ್ 3ನೇ ಅಲೆ ಆತಂಕ ಶುರುವಾಗಿದೆ.. ಕೊರೊನಾದ ಹೊರ ರೂಪಾಂತರಿ ಡೆಲ್ಟಾ ವೈರಸ್ ಕಾಟದ ನಡುವೆ ಆಗಸ್ಟ್ ವೇಳೆ 3ನೇ ಅಲೆ ಅಪ್ಪಳಿಸಲಿದೆ ಎನ್ನಲಾಗಿದೆ.. ಅದು ಅಲ್ದೇ ಇನ್ನೂ ಆಘಾತಕಾರಿ ವಿಚಾರವೆಂದ್ರೆ ಇದು ಹೆಚ್ಚಾಗಿ ಮಕ್ಕಳ ಮೇಲೆಯೇ ಪರಿಣಾಮ ಬೀರಲಾಗುತ್ತೆ ಎನ್ನಲಾಗಿದೆ.. ಹೀಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.. ಯಾಕಂದ್ರೆ ನಮ್ಮಲ್ಲಿ ಇನ್ನೂವರೆಗೂ 18 ವರ್ಷದ ಕೆಳಗಿನವರಿಗೆ ಲಸಿಕೆ ನೀಡಿಲ್ಲ..
ಆದ್ರೆ ಇದೀಗ 12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರವೇ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಮುಖ ಔಷಧ ಕಂಪನಿ ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಜೈಕೋವ್ ಡಿ ಲಸಿಕೆಯನ್ನು 12 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ.








