ಕೋವಿಡ್ : ‘ಕೇವಲ ಶೇ 2ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದೆ… ಇನ್ನೂ 98 % ಬಾಕಿ ಇದೆ’
ನವದೆಹಲಿ : ನವದೆಹಲಿ : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಮತ್ತೊಂದು ಆಘಾತಕಾರಿ ಮಾಹಿತಿ ಸಿಕ್ಕಿದೆ.. ಕೋವಿಡ್–19 ಸಾಂಕ್ರಾಮಿಕ ರೋಗಕ್ಕೆ ಭಾರತದಲ್ಲಿ ಇದುವರೆಗೆ ಒಟ್ಟು ದೇಶದ ಜನಸಂಖ್ಯೆಯ ಶೇ 2ಕ್ಕಿಂತಲೂ ಕಡಿಮೆ ಜನರು ಸೋಂಕಿಗೀಡಾಗಿದ್ದು, ಉಳಿದ ಶೇ 98ರಷ್ಟು ಜನಸಂಖ್ಯೆಯು ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ಹೇಳಿದೆ.
ಭಾರತದಲ್ಲಿ ಇದುವರೆಗೆ ಒಟ್ಟು ಜನಸಂಖ್ಯೆಯ ಶೇ 2ಕ್ಕಿಂತಲೂ ಕಡಿಮೆ ಜನರು ಕೊರೊನಾ ಸೋಂಕಿಗೀಡಾಗಿದ್ದು, ಉಳಿದ ಶೇ 98ರಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇಲ್ಲಿಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗಿದ್ದರೂ, ಇದರ ಪ್ರಮಾಣ ಒಟ್ಟು ಜನಸಂಖ್ಯೆಯ ಶೇ 2ಕ್ಕಿಂತಲೂ ಕಡಿಮೆ. ಅಂದರೆ ಶೇ 1.8ರಷ್ಟು ಜನರು ಮಾತ್ರ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.
ಮಹಾಮಾರಿಯಿಂದಾಗಿ ಅನೇಕ ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗಿದ್ರೆ , ಇನ್ನೂ ಹಲವರು ಕುಟುಂಬಸ್ಥರು , ಆಪ್ತರು , ಸ್ನೇಹಿತರನ್ನ ಕಳೆದುಕೊಂಡಿದ್ದಾರೆ.. ಮತ್ತು ಹಲವು ಕುಟುಂಬಗಳ ಆಧಾರಸ್ಥಂಬವೆನಿಸಿಕೊಂಡಿದ್ದರು ಕೊರೊನಾಗೆ ಬಲಿಯಾಗಿದ್ದು, ಕುಟುಂಬಗಳು ದಿಚ್ಚು ತೋಚದ ಪರಿಸ್ಥಿತಿಗೆ ತಲುಪಿವೆ.. ಸಿನಿಮಾ ತಾರೆಯರು ಮೃತಪಟ್ಟಿದ್ದಾರೆ. ಸೆಲೆಬ್ರಿಟಿಗಳು ಸಹ ತಮ್ಮವರನ್ನ ಕಳೆದುಕೊಂಡಿದ್ದಾರೆ.. ಇನ್ನೂ ವಿಪರ್ಯಾಸವೆಂದ್ರೆ ಮದುವೆಗೆ ಇನ್ನು ಒಂದೆರೆಡು ದಿನಗಳಿರುವಾಗಲೇ ವರ ಅಥವ ವಧು ಮೃತಪಟ್ಟಿರುವ ಘಟನೆಗಳು , ಮದುವೆಯಾದ ವಾರ -10 ದಿನಗಳೊಳಗೇ ಗಂಡ ಅಥವ ಹೆಂಡತಿ ಸಾವನಪ್ಪಿರುವುದು ಇಂತಹ ಮನಕಲುಕುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.