ದೇಶದಲ್ಲಿ 70 ‘ಡೆಲ್ಟಾ ಪ್ಲಸ್’ ರೂಪಾಂತರ ತಳಿ ಪತ್ತೆ..!
ದೇಶದಲ್ಲಿ ಕೊರೊನಾದ ರೂಪಾಂತರ ತಳಿ ಡೆಲ್ಟಾ ಪ್ಲಸ್ನ 70 ಪ್ರಕರಣಗಳು ಪತ್ತೆಯಾಗಿವೆ. 28 ಪ್ರಯೋಗಾಲಯಗಳಲ್ಲಿನ ಪರೀಕ್ಷಾ ಮಾದರಿಗಳ ಅನುಕ್ರಮದಲ್ಲಿ ಈ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಲಿಖಿತ ಉತ್ತರವನ್ನು ನೀಡಿರುವ ಅವರು, ಇದುವರೆಗೂ ಸಾರ್ಸ್–ಕೋವಿಡ್ 2 ಸೋಂಕಿನ 58,240 ಪರೀಕ್ಷಾ ಮಾದರಿಗಳನ್ನು ಅನುಕ್ರಮ ಮಾಡಲಾಗಿತ್ತು. ಈ ಪೈಕಿ 46,124 ಮಾದರಿಗಳ ವಿಶ್ಲೇಷಣೆ ನಡೆದಿದೆ ಎಂದು ತಿಳಿಸಿದರು.
ಇವುಗಳಲ್ಲಿ ಸುಮಾರು 17,169 ಪ್ರಕರಣಗಳು ಡೆಲ್ಟಾ ತಳಿಯದ್ದಾಗಿವೆ. ಉಳಿದಂತೆ 4,172 ಪ್ರಕರಣಗಳು ಅಲ್ಫಾ ತಳಿಯದ್ದಾಗಿದ್ದು, 217 ಬೆಟಾ ಪ್ರಕರಣಗಳು ಮತ್ತು 1 ಗಾಮ ತಳಿಯದ್ದಾಗಿದೆ. ಅಲ್ಲದೇ ದೇಶದಲ್ಲಿ ಕೋವಿಡ್ ಎರಡನೇ ಅಲೆಗೆ ಕಾರಣವಾಗಿದ್ದು ಡೆಲ್ಟಾ ತಳಿ ಕಾರಣ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾನಿನ್ನೂ ಸತ್ತಿಲ್ಲ ಬದುಕಿದ್ದೇನೆ , ಖುಷಿಯಾಗಿದ್ದೇನೆ – ಸಾವಿನ ವದಂತಿಗೆ ಶಕೀಲಾ ಕೊಟ್ಟ ಸ್ಪಷ್ಟನೆ
ನಾಳೆಯಿಂದ ಖಾಸಗಿ ಶಾಲೆ ಆರಂಭಿಸುವ ಬಗ್ಗೆ ರುಪ್ಸಾ ಮಹತ್ವದ ನಿರ್ಧಾರ