ದ.ಕ. ಮೊದಲ ಬಾರಿಗೆ 1,100 ದಾಟಿದ ಕೋವಿಡ್ ಪ್ರಕರಣಗಳು – ಉಡುಪಿಯಲ್ಲಿ 568 ಪ್ರಕರಣ ದಾಖಲು

1 min read
covid19

ದ.ಕ.ದಲ್ಲಿ ಮೊದಲ ಬಾರಿಗೆ 1,100 ದಾಟಿದ ಕೋವಿಡ್ ಪ್ರಕರಣಗಳು – ಉಡುಪಿಯಲ್ಲಿ 568 ಪ್ರಕರಣ ದಾಖಲು

ದಕ್ಷಿಣ ಕನ್ನಡದಲ್ಲಿ ಕೋವಿಡ್ -19 ಪರಿಸ್ಥಿತಿ ಆತಂಕಕಾರಿ ಹಂತವನ್ನು ತಲುಪಿದೆ. ಗುರುವಾರ ಜಿಲ್ಲೆಯಲ್ಲಿ 1,175 ಕೊರೋನಾ ‌ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದು ಇಲ್ಲಿಯವರೆಗಿನ ‌ಅತಿ ಹೆಚ್ಚು ಏಕದಿನ ಪ್ರಕರಣಗಳಾಗಿದೆ.
ಇದರಿಂದಾಗಿ ಜಿಲ್ಲೆಯ ಜನರು ಕೊರೋನಾ ಭೀಕರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಇಲ್ಲಿಯವರೆಗಿನ ಒಟ್ಟು ಕೊರೋನಾ ‌ಪಾಸಿಟಿವ್ ಪ್ರಕರಣಗಳ ಸಂಖ್ಯೆ 43,904 ತಲುಪಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಗುರುವಾರ 209 ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಆಸ್ಪತ್ರೆಗಳಿಂದ ಬಿಡುಗಡೆಯಾದ ಒಟ್ಟು ರೋಗಿಗಳ ಸಂಖ್ಯೆ 37,486.
Sudhakar

ಜಿಲ್ಲೆಯಲ್ಲಿ ಪ್ರಸ್ತುತ 5,662 ಸಕ್ರಿಯ ಪ್ರಕರಣಗಳಿವೆ. ಗುರುವಾರ ಕೊರೋನಾದಿಂದ ಒಂದು ಸಾವು ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸಂಬಂಧಿತ ಮೃತಪಟ್ಟವರ ಸಂಖ್ಯೆ 754 ಆಗಿದೆ.

ಉಡುಪಿ

ಆರೋಗ್ಯ ಬುಲೆಟಿನ್ ಪ್ರಕಾರ, ಉಡುಪಿ ಗುರುವಾರ 568 ಕೊರೋನಾ ‌ಪಾಸಿಟಿವ್ ಪ್ರಕರಣಗಳನ್ನು ವರದಿ ಮಾಡಿದೆ. ಸೋಂಕಿತ ರೋಗಿಗಳ ಒಟ್ಟು ಸಂಖ್ಯೆ 30,882 ಆಗಿದೆ.

ಗುರುವಾರದ ವೇಳೆಗೆ 439 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬಿಡುಗಡೆಯಾದ ಒಟ್ಟು ರೋಗಿಗಳ ಸಂಖ್ಯೆ 28,328. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 2,358. ಜಿಲ್ಲೆಯಲ್ಲಿ ಸೋಂಕಿನಿಂದ ಗುರುವಾರ ಇಬ್ಬರು ಮೃತಪಟ್ಟಿದ್ದಾರೆ. ಕೋವಿಡ್ -19 ರಿಂದ ಮೃತಪಟ್ಟವರ ಒಟ್ಟು ಸಾವಿನ ಸಂಖ್ಯೆ 196 ಆಗಿದೆ.

wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ

#Covid19

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd