ದೇಶದಲ್ಲಿ ಮತ್ತೆ ಕೊರೊನಾ ಮಹಾಸ್ಪೋಟ..! 3ನೇ ಅಲೆ ಶುರುವಾಯ್ತಾ..?
ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ.. ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ..
ಇಂದು ಕೊರೊನಾ ಮಹಾಸ್ಪೋಟವಾಗಿದೆ.. ಹೌದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 46,700 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ. 509 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು ಕಳೆದ 2 ತಿಂಗಳಲ್ಲೇ ದಾಖಲಾದ ಗರಿಷ್ಠ ಸೋಂಕು ಪ್ರಕರಣಗಳಾಗಿವೆ.
ಏನಿದು ಪ್ರತಿಕಾಯ/ ಆಂಟಿಬಾಡಿ ಪರೀಕ್ಷೆ? ಕೊರೋನಾ ವಿರುದ್ಧದ ಹೋರಾಟದಲ್ಲಿ ಇದು ಹೇಗೆ ಸಹಾಯ ಮಾಡುತ್ತದೆ?
ದೇಶದಲ್ಲಿ ಒಂದು ದಿನದಲ್ಲಿ 31,374 ಮಂದಿ ಗುಣಮುಖಿತರಾಗಿದ್ದು ಒಟ್ಟಾರೆ ಗುಣಮುಖಿತರ ಸಂಖ್ಯೆ 3,18,52,802ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,59,775ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಒಟ್ಟಾರೆ ಸೋಂಕಿತರ ಸಂಖ್ಯೆ 3,26,49,947ಕ್ಕೆ ಏರಿಕೆಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,37,370ಕ್ಕೆ ಏರಿಕೆಯಾಗಿದೆ.