ಕೋವಿಡ್ 19 : ನಿರಂತರ ಏರಿಕೆಯಾಗ್ತಲೇ ಇದೆ ಸಾವಿನ ಸಂಖ್ಯೆ – 3ನೇ ಅಲೆ ಆತಂಕ..?
ನವದೆಹಲಿ : ಮತ್ತೆ ಇದೀಗ ಏರಿಕೆ ಪಥದತ್ತ ಸೈನಂದಿನ ಕೇಸ್ ಗಳ ಸಂಖ್ಯೆ ಸಾಗಿದ್ದು, 3ನೇ ಅಲೆ ಆತಂಕ ಶುರುವಾಗ್ತಿದೆ. ಆದ್ರೆ ಆತಂಕವನ್ನ ದುಪ್ಪಟ್ಟು ಮಾಡಡಿರುವುದು ಏರಿಕೆಯಾಗ್ತಲೇ ಇರುವ ಸಾವಿನ ಸಂಖ್ಯೆ . ಹೌದು ಕಳೆದ ವಾರದಿಂದ ಸಾವಿನ ಸಂಖ್ಯೆ 500 ದಾಟಿದೆ. ಇಂದು ಆಘಾತಕಾರಿ ಎಂಬಂತೆ ಸಾವಿನ ಸಂಖ್ಯೆಯು 800ರ ಗಡಿ ದಾಟಿದೆ.
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 14,348 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಅಲ್ಲದೆ 805 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,42,46,157 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 4,57,191ಕ್ಕೆ ತಲುಪಿದೆ.
ಇನ್ನು ದೇಶದಲ್ಲಿ ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 1,61,334 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 13,198 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,36,27,632 ಕ್ಕೆ ತಲುಪಿದೆ.
ಕಾಶ್ಮೀರ : ಪಾಕ್ ಪರ ಘೋಷಣೆ ವಿರೋಧಿಸಿದ ವಿದ್ಯಾರ್ಥಿನಿಗೆ ಜೀವ ಬೆದರಿಕೆ