ಕೊರೊನಾ ರಿಪೋರ್ಟ್ – 24 ಗಂಟೆಯಲ್ಲಿ 18,166 ಜನರಲ್ಲಿ ಸೋಂಕು ಪತ್ತೆ – 7 ತಿಂಗಳಲ್ಲೇ ಅತಿ ಕಡಿಮೆ
ದೇಶದಲ್ಲಿ ಪ್ರತಿನಿತ್ಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 18,166 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ನಿನ್ನೆ ಮಹಾಮಾರಿಗೆ 214 ಸೋಂಕಿತರು ಉಸಿರು ಚೆಲ್ಲಿದ್ದಾರೆ. ಇದು 7 ತಿಂಗಳಲ್ಲೇ ದೈನಂದಿನ ಪ್ರಕರಣಗಳು ದಾಖಲಾದ ಸಂಖ್ಯೆಗೆ ಹೋಲಿಕೆಯಲ್ಲಿ ಅತಿ ಕಡಿಮೆಯಾಗಿದ್ದು, ಸಮಾಧಾನಕರ ಸಂಗತಿಯೂ ಆಗಿದೆ.
ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,39,53,475 ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ 4,50,589 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 2,30,971, ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇದೇ ಅವಧಿಯಲ್ಲಿ 23,624 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಈವರೆಗೆ 3,32,71,915 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.