Covid19 : ಇಡೀ ವಿಶ್ವದಲ್ಲಿ ಕೋವಿಡ್ ಮುಕ್ತವಾಗಿರುವ ದೇಶಗಳು ಇವೆರೆಡೇ..!!
ಇಡೀ ವಿಶ್ವಕ್ಕೆ ಕೊರೊನಾ ಎಂಬ ಮಹಾಮಾರಿಯನ್ನ ಹಬ್ಬಿಸಿದ್ದ ಚೀನಾ ಕೋಟ್ಯಾಂತರ ಜನರ ಸಾವಿಗೆ ಕಾರಣವಾಗಿತ್ತು..
ಇಂದಿಗೂ ಕುತಂತ್ರಿ ಚೀನಾವನ್ನ ಇಡೀ ವಿಶ್ವವೇ ಶಪಿಸುತ್ತಿದೆ..
ಇನ್ನೇನು ಕೊರೊನಾ ಹಾವಳಿ ಕಡಿಮೆಯಾಗಿಯೇ ಬಿಡ್ತು ಎನ್ನುವ ಹೊತ್ತಲ್ಲೇ ಇದೀಗ ಕೊರೊನಾ ತಾಯ್ನಾಡು ಚೀನಾದಲ್ಲಿ ಕೋವಿಡ್ ಹಾವಳಿ ಹೆಚ್ಚಾಗಿದೆ..
ಎಷ್ಟರ ಮಟ್ಟಿಗೆಂದ್ರೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ.. ಇಡೀ ವಿಶ್ವವೇ ಕಳೆದ ಮೂರು ವರ್ಷಗಳಿಂದ ತ್ತರಿಸುತ್ತಿವೆ..
ಆದ್ರೆ ಅಚ್ಚರಿ ಎಂಬಂತೆ ಇಡೀ ದೇಶವೇ ಸಂಕಷ್ಟ ಎದುರಿಸಿದ ಕೋವಿಡ್ ಇವೆರೆಡು ದೇಶಗಳತ್ತ ದೂರ ದೂರದ ವರೆಗೂ ಸುಳಿದಿಲ್ಲ..
ಎರಡು ದೇಶಗಳಲ್ಲಿ ಮಾತ್ರ ಒಂದೇ ಒಂದು ಕೋವಿಡ್ ಪ್ರಕರಣ ದೃಢಪಟ್ಟಿಲ್ಲ. ಈ ದೇಶಗಳು ಸದ್ಯ ಕೋವಿಡ್ ಮುಕ್ತವಾಗಿವೆ. ತುರ್ಕಮೆನಿಸ್ತಾನ್ ಹಾಗೂ ಉತ್ತರ ಕೊರಿಯಾ
ದೇಶಗಳು ಮಾತ್ರ ಕೋವಿಡ್ ಮುಕ್ತವಾಗಿವೆ. ಈ ದೇಶಗಳು ಜನರು ಕೊರೊನಾ ವೈರಸ್ ಭೀತಿಯಿಲ್ಲದೇ ಆರಾಮಾಗಿ ಓಡಾಡಿಕೊಂಡಿದ್ದಾರೆ.
ಈ ದೇಶಗಳ ಆರೋಗ್ಯ ಇಲಾಖೆ ನೀಡಿರುವ ವರದಿ ನೋಡಿ ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಅಚ್ಚರಿಗೊಂಡಿದೆ. ತುರ್ಕಮೆನಿಸ್ತಾನ್ ಮತ್ತು ಉತ್ತರ ಕೊರಿಯಾ ದೇಶಗಳು ಕೊರೊನಾ ಮುಕ್ತವಾಗಿರುವ ವಿಚಾರ ಬೆಳಕಿಗೆ ಬಂದಿದೆ.
WHO ಪಟ್ಟಿಯು ಎಲ್ಲಾ ದೇಶಗಳನ್ನು ಹೊಂದಿದೆ. ಆಯಾ ಸರ್ಕಾರಗಳು ಬಿಡುಗಡೆ ಮಾಡಿರುವ COVID-19 ಪ್ರಕರಣಗಳ ಸಂಖ್ಯೆಯನ್ನು ಪಟ್ಟಿಯು ಹೊಂದಿದೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ತುರ್ಕಮೆನಿಸ್ತಾನ್ ಕಳಪೆ ಸ್ಥಾನದಲ್ಲಿದೆ.
ಅಷ್ಟೇ ಅಲ್ಲ, 2019ರ ಜಾಗತಿಕ ಆರೋಗ್ಯ ಭದ್ರತಾ ಸೂಚ್ಯಂಕದಲ್ಲಿ 195 ದೇಶಗಳ ಪೈಕಿ ತುರ್ಕಮೆನಿಸ್ತಾನ್ 101ನೇ ಸ್ಥಾನದಲ್ಲಿದೆ.
ಹೀಗಿದ್ದೂ ಈ ದೇಶದಲ್ಲಿ ಸದ್ಯ ಒಂದು ಕೋವಿಡ್ ಪ್ರಕರಣ ಕೂಡ ವರದಿಯಾಗಿಲ್ಲ ಎನ್ನಲಾಗಿದೆ. ಉತ್ತರ ಕೊರಿಯಾ ಆಗಸ್ಟ್ನಲ್ಲಿ ತನ್ನ ಮೊದಲ ಕೋವಿಡ್ ಪ್ರಕರಣವನ್ನು ದೃಢಪಡಿಸಿತ್ತು.
ನಂತರ ಅನಾರೋಗ್ಯಕ್ಕೆ ಒಳಗಾದವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಅಂದಿನಿಂದ ಈವರೆಗೂ ಈ ದೇಶದಲ್ಲಿ ಕೋವಿಡ್ ಪ್ರಕರಣ ವರದಿಯಾಗಿಲ್ಲ.