ಮೇ 1 ರಿಂದ ಕೋವಿಡ್-19 ವ್ಯಾಕ್ಸಿನೇಷನ್ 3ನೇ ಡ್ರೈವ್ – ಯಾವ್ಯಾವ ಲಸಿಕೆಗಳು ಲಭ್ಯ? ದರವೆಷ್ಟು ? ಯಾವುದು ಸುರಕ್ಷಿತ ? – ಸಂಪೂರ್ಣ ಮಾಹಿತಿ ಇಲ್ಲಿದೆ
ಭಾರತದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದೆ. ಹಿಂದಿನ ಅಲೆಗೆ ಹೋಲಿಸಿದರೆ ಇಂದು ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ.
ಮಾಸ್ಕ್ ಧರಿಸದೆ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಈ ವೈರಲ್ ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈಗ ಸೋಂಕು ನಿಯಂತ್ರಣಕ್ಕೆ ಅದೆಷ್ಟೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೂಡ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದೇಶದಲ್ಲಿ ಕೋವಿಡ್ ಸಕ್ರಿಯ ಕೇಸ್ ಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಇದೀಗ ಬೆಂಗಳೂರಿನಲ್ಲಿ 1,49,624 ಸಕ್ರಿಯ ಪ್ರಕರಣಗಳು ದಾಖಲಾಗಿದೆ.
ಕರ್ನಾಟಕದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ 17 ಸಾವಿರಕ್ಕೂ ಹೆಚ್ಚು ವರದಿಯಾಗುತ್ತಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲೇ ದಿನಕ್ಕೆ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಪರಿಣಾಮ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಮ್ಲಜನಕದ ಕೊರತೆ, ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದ ರೆಮ್ಡೆಸಿವಿರ್ ಔಷಧಿಯ ಕೊರತೆ ಉಂಟಾಗುತ್ತಿದೆ. ಕೊರೋನಾ ತಡೆಗಟ್ಟುವ ಸಲುವಾಗಿ ಈಗಾಗಲೇ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ, ವೀಕ್ ಎಂಡ್ ಕರ್ಫ್ಯೂ ಜಾರಿಗೊಳಿಸಿದ್ದರೆ, ಕೇಂದ್ರ ಸರ್ಕಾರ ಮೇ 1 ರಿಂದ ಕೋವಿಡ್-19 ವ್ಯಾಕ್ಸಿನೇಷನ್ನ 3 ನೇ ಹಂತದ ಡ್ರೈವ್ ಅನ್ನು ಪ್ರಾರಂಭಿಸಿದೆ. ಮೂರನೇ ಹಂತದ ವ್ಯಾಕ್ಸಿನೇಷನ್ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್ -19 ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಈ ಸಾಂಕ್ರಾಮಿಕ ರೋಗವನ್ನು ಸೋಲಿಸಲು ಲಸಿಕೆ ಬಹಳ ಮುಖ್ಯವಾದ ಆಯುಧವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=nTkba6hlP1A
ಕೋವಿಡ್-19 ವ್ಯಾಕ್ಸಿನೇಷನ್ನ ಮೊದಲ ಹಂತದಲ್ಲಿ, 60 ವರ್ಷ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆಯನ್ನು ನೀಡಲಾಯಿತು. ನಂತರ ಎರಡನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಲಾಗುತ್ತಿದೆ.
ಮುಂದಿನ ತಿಂಗಳು ಪ್ರಾರಂಭವಾಗುವ ವ್ಯಾಕ್ಸಿನೇಷನ್ ಡ್ರೈವ್ನ ಮೂರನೇ ಹಂತದ ಅಡಿಯಲ್ಲಿ, ತಯಾರಕರು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ 50 ಪ್ರತಿಶತದಷ್ಟು ಪ್ರಮಾಣವನ್ನು ಪೂರೈಸಲು ಮುಕ್ತರಾಗಿರುತ್ತಾರೆ. ಖಾಸಗಿ ಆಸ್ಪತ್ರೆಗಳು ಮತ್ತು ರಾಜ್ಯಗಳಿಗೆ ನೇರವಾಗಿ ಉತ್ಪಾದಕರಿಂದ ಡೋಸೇಜ್ ಖರೀದಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ಪ್ರಸ್ತುತ ಲಭ್ಯವಿರುವ ಕೋವಿಡ್-19 ಲಸಿಕೆಗಳ ಬಗೆಗಿನ ವಿವರಗಳು ಇಲ್ಲಿದೆ
ಕೋವಿಶೀಲ್ಡ್
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ ಯೂನಿವರ್ಸಿಟಿ ಲಸಿಕೆಯಾದ ಕೋವಿಶೀಲ್ಡ್ ಅಡೆನೊವೈರಸ್ ವೆಕ್ಟರ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ.
ಸುರಕ್ಷತೆ: ಕೋವಿಶೀಲ್ಡ್ ಸುರಕ್ಷಿತ ಲಸಿಕೆಯಾಗಿದ್ದು, ಹೆಚ್ಚಾಗಿ ಸೌಮ್ಯದಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ. ಕೋವಿಶೀಲ್ಡ್ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದೆ. ಆದರೆ ಲಸಿಕೆಯನ್ನು ಬಳಸುವುದರಿಂದ ಸಿಗುವ ಪ್ರಯೋಜನಗಳು ಅಪಾಯಗಳನ್ನು ಮೀರಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಹೇಳಿವೆ.
ಇದು ಪ್ರಸ್ತುತ ಪ್ರತಿ ಡೋಸ್ಗೆ 150 ರೂ.ಗೆ ಮಾರಾಟವಾಗುತ್ತಿದ್ದು, ಖಾಸಗಿ ಮಾರುಕಟ್ಟೆಯಲ್ಲಿನ ಬೆಲೆ ಪ್ರತಿ ಡೋಸ್ಗೆ 1,000 ರೂ ಆಗಿದೆ
ಕೋವಾಕ್ಸಿನ್ : ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) – ಪುಣೆ ಒದಗಿಸಿದ SARS-ಕೋವಿ -2 ಸ್ಟ್ರೈನ್ ಆಧರಿಸಿ ಈ ಲಸಿಕೆಯನ್ನು ಮೇಡ್ ಇನ್ ಇಂಡಿಯಾ ಅಡಿಯಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.
ಸುರಕ್ಷತೆ: ಕೊವಾಕ್ಸಿನ್ ಹೆಚ್ಚಾಗಿ ಲಘುವಿನಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುವ ಸುರಕ್ಷಿತ ಲಸಿಕೆ. ಎರಡು ಡೋಸ್ಗಳ ನಡುವಿನ ನಾಲ್ಕು ವಾರಗಳ ನಂತರ 81 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ. ಭಾರತದಲ್ಲಿ ಇದು ಲಭ್ಯವಿದ್ದು, ಭಾರತದಲ್ಲೆ ಇದನ್ನು ತಯಾರಿಸಲಾಗುತ್ತಿದೆ.
ಪ್ರಸ್ತುತ ಸರ್ಕಾರಕ್ಕೆ ಪ್ರತಿ ಡೋಸ್ಗೆ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲಿನ ಬೆಲೆ ತಿಳಿದಿಲ್ಲ.
ಸ್ಪುಟ್ನಿಕ್ ವಿ : ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದ ಗೇಮ್ಲ್ಯ ಕೇಂದ್ರ ಮತ್ತು ರಷ್ಯಾದ ಸರ್ಕಾರಿ ಸವರಿನ್ ವೆಲ್ತ್ ಫಂಡ್ ಅಭಿವೃದ್ಧಿಪಡಿಸಿದೆ.
ಸುರಕ್ಷತೆ: ರಷ್ಯಾ ಮತ್ತು ಇತರ ದೇಶಗಳಲ್ಲಿ ಸ್ಪುಟ್ನಿಕ್ ವಿ ಅಪ್ಡೇಟ್ ಲಸಿಕೆ ಹೆಚ್ಚಾಗಿ ಸುರಕ್ಷಿತವಾಗಿದ್ದು, ಲಘುವಿನಿಂದ ಮಧ್ಯಮ ಅಡ್ಡಪರಿಣಾಮಗಳು ಕಾಣಿಸಿಕೊಂಡಿದೆ.
ಸುರಕ್ಷತೆ: ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವಿವರಗಳಿಂದ ತಿಳಿದುಬಂದಿರುವ ಪ್ರಕಾರ ಸ್ಪುಟ್ನಿಕ್ ವಿ ಡೇಟಾವು 91.6 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ. ಲಭ್ಯತೆ: ಭಾರತದಲ್ಲಿ ಇದಕ್ಕೆ ಅನುಮೋದನೆ ದೊರಕಿದ್ದು ಮೇ ತಿಂಗಳಿನಿಂದ ಲಭ್ಯವಾಗುವ ನಿರೀಕ್ಷೆಯಿದೆ.
ಬೆಲೆ: ಒಂದು ಡೋಸ್ನ ಸೂಚಿಸಲಾದ ಬೆಲೆ ಪ್ರತಿ ಡೋಸ್ಗೆ $ 10 ಅಥವಾ 750 ರೂ
ಜಾನ್ಸನ್ & ಜಾನ್ಸನ್ : ಜೆ & ಜೆ ಲಸಿಕೆ ಅಡೆನೊವೈರಸ್ ವೆಕ್ಟರ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ.
ಸುರಕ್ಷತೆ: ಜೆ & ಜೆ ಸುರಕ್ಷಿತ ಲಸಿಕೆಯಾಗಿದ್ದು, ಇದು ಲಘುವಿನಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ. ಯುಎಸ್ ಲ್ಲಿ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲಾಗುತ್ತಿದೆ. :
ಜೆ & ಜೆ ಕೋವಿಡ್ -19 ಲಸಿಕೆ ಒಂದೇ ಡೋಸ್ ಸಾಕಾಗುತ್ತದೆ. ಭಾರತದಲ್ಲಿ ಇದಕ್ಕೆ ಅನುಮೋದನೆ ಇಲ್ಲ.
ಬೆಲೆ: ಜೆ & ಜೆ ಲಸಿಕೆ ಪ್ರತಿ ಡೋಸ್ಗೆ $ 10 ಬೆಲೆಯಿರುತ್ತದೆ.
ಫಿಜರ್-ಬಯೋಟೆಕ್ಪ್ಲ್ಯಾಟ್ಫಾರ್ಮ್: ಫಿಜರ್ ಲಸಿಕೆ ಜೆನೆಟಿಕ್ ಮೆಟೀರಿಯಲ್ ಅಥವಾ ಎಂಆರ್ಎನ್ಎ ಆಧರಿಸಿದೆ.
ಸುರಕ್ಷತೆ: ಇದು ಹೆಚ್ಚಾಗಿ ಲಘುವಿನಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುವ ಸುರಕ್ಷಿತ ಲಸಿಕೆ. ಫಿಜರ್ ಲಸಿಕೆ ಎರಡನೇ ಡೋಸ್ ನಂತರ 95 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ.
ಲಭ್ಯತೆ: ಭಾರತದಲ್ಲಿ ಅನುಮೋದನೆ ಇಲ್ಲ.
ಬೆಲೆ: ಲಸಿಕೆಯನ್ನು ಪ್ರತಿ ಡೋಸ್ಗೆ $19.5 ಎಂದು ನಿಗದಿಪಡಿಸಲಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಡೋಸ್ಗೆ $10 ದರದಲ್ಲಿ ಲಭ್ಯವಿದೆ.
ಮಾಡರ್ನಾ ಪ್ಲ್ಯಾಟ್ಫಾರ್ಮ್: ಮಾಡರ್ನಾ ಕೋವಿಡ್ -19 ಲಸಿಕೆ ಜೆನೆಟಿಕ್ ಮೆಟೀರಿಯಲ್ ಅಥವಾ ಎಂಆರ್ಎನ್ಎ ಆಧರಿಸಿದೆ.
ಸುರಕ್ಷತೆ: ಇದು ಹೆಚ್ಚಾಗಿ ಸೌಮ್ಯದಿಂದ ಮಧ್ಯಮ ಅಡ್ಡಪರಿಣಾಮಗಳನ್ನು ಹೊಂದಿರುವ ಸುರಕ್ಷಿತ ಲಸಿಕೆ. ಮಾಡರ್ನಾ ಲಸಿಕೆ ಎರಡನೇ ಡೋಸ್ ನಂತರ ಶೇಕಡಾ 94 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ. ಲಭ್ಯತೆ: ಭಾರತದಲ್ಲಿ ಅನುಮೋದನೆ ಇಲ್ಲ.
ಲಸಿಕೆಗೆ ಯುಎಸ್ನಲ್ಲಿ ಪ್ರತಿ ಡೋಸ್ಗೆ $ 15 ಬೆಲೆಯಿರುತ್ತದೆ.
ಕೊರೋನಾ ವ್ಯಾಕ್ಸಿನೇಷನ್ ಕೊರೋನಾ ಸಂಬಂಧಿತ ಮರಣ ಪ್ರಮಾಣವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ದೇಹದಲ್ಲಿ ಕೋವಿಡ್ ವೈರಸ್ ತಡೆಗಟ್ಟಲು ಬೇಕಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವ್ಯಾಕ್ಸಿನೇಷನ್ ಪಡೆದ ಬಳಿಕ ಕೂಡ ಸೋಂಕಿಗೆ ತುತ್ತಾಗುವ ಸಂಭವವಿದ್ದರೂ ಅಪಾಯದ ಪರಿಣಾಮ ಕಡಿಮೆ ಇರುತ್ತದೆ. ಆದುದರಿಂದ ವ್ಯಾಕ್ಸಿನೇಷನ್ ಪಡೆದ ಬಳಿಕವೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು, ಜನಸಂದಣಿಯಿಂದ ದೂರವಿರುವುದು ಅಗತ್ಯ.
#Covid19 #vaccinationdrive #covidvaccine
ಆರೋಗ್ಯಕರ ಶಕ್ತಿಯುತ ಲಿವರ್/ಶ್ವಾಸಕೋಶಕ್ಕಾಗಿ ಮನೆಮದ್ದುಗಳು#Saakshatv #healthtips #Homeremedies https://t.co/N9Q4oC4hwR
— Saaksha TV (@SaakshaTv) April 20, 2021
ದರ್ಶನ್ ಮೇಲೆ ನಾನು ಬಹಳ ಕ್ರಶ್ ಹೊಂದಿದ್ದೇನೆ – ನಟಿ ಗಾಯತ್ರಿ ಐಯ್ಯರ್#Darshan #VinodhPrabhakar #gayathri #sandalwood https://t.co/ovvgICjjcW
— Saaksha TV (@SaakshaTv) April 20, 2021
ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್#Saakshatv #cookingrecipe #chocolate #milkshake https://t.co/JCAQoyp8GI
— Saaksha TV (@SaakshaTv) April 20, 2021
ಕೋವಿಡ್ -19 ಎರಡನೇ ಅಲೆ ಪ್ರಕರಣಗಳು ಭಾರತದಲ್ಲಿ ಎಷ್ಟು ಸಮಯದ ಬಳಿಕ ಇಳಿಮುಖ ಕಾಣಲಿದೆ ?#covid19 #secondwave https://t.co/ViqnbxhzTN
— Saaksha TV (@SaakshaTv) April 20, 2021