ಲಸಿಕೆ ನೀಡಿಕೆ ವಿಚಾರದಲ್ಲಿ 5ನೇ ಬಾರಿಗೆ ದಾಖಲೆ ಬರೆದ ಭಾರತ..!
ನವದೆಹಲಿ : ಕೊರೊನಾ ಕಾಟದ ನಡುವೆ ವಿಶ್ವವನ್ನೇ ಕಾಡುತ್ತಿರುವ ರೂಪಾಂತರಿ ಓಮ್ರಿಕಾನ್ ಬಾರತ ಅದ್ರಲ್ಲೂ ಕರ್ನಾಟಕ್ಕೂ ಲಗ್ಗೆ ಇಟ್ಟಿದೆ.. ಮತ್ತೊಂದ್ ಕಡೆ ಲಸಿಕೆ ಅಭಿಯಾನವೂ ಬಿರುಸು ಪಡೆದುಕೊಂಡಿದೆ.. ಅಲ್ಲದೇ ಲಸಿಕೆಯೆ ಅಭಿಯಾನದಲ್ಲಿ ಭಾರತ 5ನೇ ಬಾರಿಗೆ ದಾಖಲೆ ಬರೆದಿದೆ.. ಓಮಿಕಾನ್ ವೈರಸ್ ಪತ್ತೆಯಾಗಿರುವ ಬೆನ್ನಲ್ಲೇ ದೇಶಾದ್ಯಂತ ಮತ್ತೆ ಜನರು ಲಸಿಕೆ ತೆಗೆದುಕೊಳ್ಳುತ್ತ ಗಮನ ಹರಿಸುತ್ತಿದ್ದಾರೆ.
ಶನಿವಾರ ಒಂದೇ ದಿನ 1 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಲಾಗಿದೆ. 2 ತಿಂಗಳ ಬಳಿಕ ಮೊದಲ ಬಾರಿಗೆ 1 ಕೋಟಿಗಿಂತ ಹೆಚ್ಚು ಡೋಸ್ ನೀಡಲಾಗಿದೆ. ಇದುವರೆಗೆ ನೀಡಲಾದ ಒಟ್ಟು ಲಸಿಕೆಯ ಪ್ರಮಾಣ 127.5 ಕೋಟಿ ಡೋಸ್ ದಾಟಿದೆ. ನಿನ್ನೆ ರಾತ್ರಿ 8.15ರ ವೇಳೆಗೆ 1 ಕೋಟಿಗಿಂತ ಹೆಚ್ಚು ಡೋಸ್ ನೀಡಲಾಗಿದೆ.
ಒಂದು ದಿನದಲ್ಲಿ 1 ಕೋಟಿಗಿಂತ ಹೆಚ್ಚು ಲಸಿಕೆ ನೀಡಲಾಗಿದೆ ಇದು 5ನೇ ಬಾರಿಗೆ ದಾಖಲೆ ಬರೆದಂತಾಗಿದೆ. ಈ ಹಿಂದೆ ಆ.27ರಂದು ದೇಶಾದ್ಯಂತ 1 ಕೋಟಿಗಿಂತ ಹೆಚ್ಚು ಡೋಸ್ ನೀಡಲಾಗಿತ್ತು. ಪ್ರಧಾನಿ ಮೋದಿ ಅವರ ಜನ್ಮದಿನದಂದು 2 ಕೋಟಿ ಜನಕ್ಕೆ ಲಸಿಕೆ ನೀಡಲಾಗಿತ್ತು. ಹೀಗೆ ವಿಶ್ವದಲ್ಲೇ ಭಾರತ ಹೊಸ ದಾಖಲೆ ಬರೆದಿತ್ತು..








