ಲಸಿಕೆಗಳು ಎಲ್ಲಿವೆ..? ಲಸಿಕೆಗಳ ವಿವರ ಕೊಟ್ಟು ಕೇಂದ್ರವನ್ನು ತಿವಿದ ರಾಹುಲ್ ಗಾಂಧಿ
ಲಸಿಕೆಗಳು ಎಲ್ಲಿವೆ..?
ಕೇಂದ್ರವನ್ನು ತಿವಿದ ರಾಹುಲ್ ಗಾಂಧಿ
ಕೋವಿಡ್ ಆರಂಭದಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳನ್ನ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ಮತ್ತೆ ಟ್ವೀಟ್ ಮೂಲಕ ಕೇಂದ್ರವನ್ನ ತಿವಿದಿದ್ದಾರೆ.. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ , ದೇಶದ ಜನರ ಮನದ ಮಾತು ಅರ್ಥೈಸಿಕೊಂಡಿದ್ದರೆ ಇಂತಹ ಪರಿಸ್ಥಿತಿ ಇರುತ್ತಿರಲಿಲ್ಲ. ಲಸಿಕೆಗಳು ಎಲ್ಲಿವೆ ಎಂದು ಕೇಂದ್ರವನ್ನ ಪ್ರಶ್ನಿಸಿದ್ದಾರೆ. ಈ ಸಂಬಂಧ ರಾಹುಲ್ ಗಾಂಧಿ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಕೊರೊನಾ ವೈರಸ್ ಮೂರನೇ ಅಲೆಯನ್ನು ತಡೆಯಲು ಮತ್ತು 2021ರ ಡಿಸೆಂಬರ್ ವೇಳೆಗೆ ಶೇಕಡ 60ರಷ್ಟು ಜನಸಂಖ್ಯೆಗೆ ಲಸಿಕೆ ಹಾಕುವ ಗುರಿಯನ್ನು ಒಳಗೊಂಡಿರುವ ವಿಷಯಗಳು ವಿಡಿಯೊದಲ್ಲಿವೆ.
ಸರ್ಕಾರ ನಿಗದಿಪಡಿಸಿರುವ ಗುರಿ ಅನ್ವಯ, ಪ್ರತಿ ದಿನ 93 ಲಕ್ಷ ಮಂದಿಗೆ ಲಸಿಕೆ ಹಾಕುವುದು ಅಗತ್ಯವಿದೆ. ಆದರೆ, ಕಳೆದ 7 ದಿನಗಳಲ್ಲಿ ಪ್ರತಿ ದಿನ 36 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ. ಜುಲೈ 24ರಂದು 23 ಲಕ್ಷ ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ ಎನ್ನುವ ವಿವರಗಳನ್ನು ಒಳಗೊಂಡಿರುವ ಗ್ರಾಫ್ ವಿಡಿಯೊದಲ್ಲಿದೆ.ಈ ವಿಡಿಯೋ ಹಂಚಿಕೊಂಡು ಸರ್ಕಾರವನ್ನ ಕಟುವಾಗಿ ಟೀಕಿಸಿ ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ ರಾಹುಲ್ ಗಾಂಧಿ.








