2 ಬೇರೆ ಬೇರೆ ಕೊರೊನಾ ಲಸಿಕೆ ನೀಡಿದ್ರೆ ಏನಾಗುತ್ತೆ : WHO ಹೇಳಿದ್ದೇನು..?
ವಿಶ್ವಾದ್ಯಂತ ಕೊರೊನಾ ವೈರಸ್ , ರೂಪಾಂತರ ತಳಿಗಳ ಹಾವಳಿಯ ನಡುವೆ ಕೊರೊನಾ ಲಸಿಕೆ ಅಭಿಯಾನವೂ ಹೆಚ್ಚಾಗಿದೆ.. ಈ ನಡುವೆ ಅನೇಕ ಲಸಿಕೆಗಳ ಬಗ್ಗೆ ಹಲವಾರು ಗೊಂದಲಗಳಿದ್ದು, ಅದ್ರಲ್ಲಿ ಚೀನೀಯ ಲಸಿಕೆಯೂ ಒಂದಾಗಿದೆ.. ಆದ್ರೆ ಕೊರೊನಾ ಲಸಿಕೆ ಮಿಕ್ ಅಂಡ್ ಮ್ಯಾಚ್ ( 2 ಬೇರೆ ಬೇರೆ ಲಸಿಕೆ ನೀಡುವಿಕೆ) ಮಾಡೋದರ ಕುರಿತು ಇದೀಗ ವಿಶ್ವಾದ್ಯಂತ ವ್ಯಾಪಕವಾಗಿ ಚರ್ಚೆಯಾಗ್ತಿದೆ. ವಿವಿಧ ಕಂಪನಿಗಳ ಲಸಿಕೆಗಳನ್ನು ಜನರು ಮಿಕ್ಸ್ ಮಾಡಿ ತೆಗೆದುಕೊಳ್ತಿದ್ದಾರೆ.
ಐಬಿಪಿಎಸ್ – ಗುಮಾಸ್ತರ ಹುದ್ದೆಗೆ 5830 ಆನ್ಲೈನ್ ಅರ್ಜಿ ಆಹ್ವಾನ
ಮೊದಲು ಒಂದು ಕಂಪನಿ ಲಸಿಕೆ ತೆಗೆದುಕೊಂಡ್ರೆ ಎರಡನೇ ಡೋಸ್ ಸಂದರ್ಭದಲ್ಲಿ ಬೇರೆ ಕಂಪನಿ ಲಸಿಕೆ ತೆಗೆದುಕೊಳ್ತಿದ್ದಾರೆ. ಆದ್ರೆ ಇದು ಅಪಾಯಕಾರಿ ಎಂದು WHO ಎಚ್ಚರಿಕೆ ನೀಡಿದೆ.. ಹೌದು WHO ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಪ್ರಕಾರ, ಲಸಿಕೆ ಮಿಕ್ಸಿಂಗ್ ನಿಂದ ಏನು ಪರಿಣಾಮವಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದ್ದರಿಂದ ಎಲ್ಲರೂ ಜಾಗರೂಕರಾಗಿರಬೇಕೆಂದು ಅವರು ಹೇಳಿದ್ದಾರೆ. ಇನ್ನೂ ಅನೇಕ ಜನರು ಮಿಕ್ಸಿಂಗ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಬೇರೆ ಬೇರೆ ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಬಹುದು. ಆದ್ರೆ ಇದ್ರ ಬಗ್ಗೆ ಯಾವುದೇ ಡೇಟಾ ಲಭ್ಯವಿಲ್ಲದ ಕಾರಣ ಒಂದೇ ಕಂಪನಿ ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದೆಂದು ಎಂದು ಹೇಳಿದ್ದಾರೆ.