ಸಿ.ಪಿ.ಯೋಗೇಶ್ವರ್ ಮಾತು ಯಾರಿಗೂ ಲೆಕ್ಕಕ್ಕಿಲ್ಲ : ಕೆ.ಜಿ.ಬೋಪಯ್ಯ madikeri
ಮಡಿಕೇರಿ : ಸಚಿವ ಸಿ.ಪಿ ಯೋಗೇಶ್ವರ್ ಮಾತನ್ನೆಲ್ಲ ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅಂತವರ ಮಾತಿಗೆಲ್ಲಾ ಯಾವುದೇ ಬೆಲೆ ಇಲ್ಲ ಎಂದು ಯೋಗೇಶ್ವರ್ ವಿರುದ್ಧ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಫುಲ್ ಗರಂ ಆಗಿದ್ದಾರೆ.
ಸಿಎಂ ಬದಲಾವಣೆ ಮತ್ತು ಸಿ ಪಿ ಯೋಗೇಶ್ವರ್ ಬಗ್ಗೆ ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ.ಬೋಪಯ್ಯ, ಯೋಗೇಶ್ವರ್ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ.
ಯೋಗೇಶ್ವರ್ ಮಾತನ್ನೆಲ್ಲ ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅಂತವರ ಮಾತಿಗೆಲ್ಲಾ ಯಾವುದೇ ಬೆಲೆ ಇಲ್ಲ ಎಂದು ತಿರುಗೇಟು ನೀಡಿದರು.
ಇನ್ನು ಯಡಿಯೂರಪ್ಪ ಅವರೇ ಮುಂದೆಯೂ ಸಿಎಂ ಆಗಿ ಮುಂದುವರಿಯುತ್ತಾರೆ.
ಸಿಎಂ ಸ್ಥಾನದಿಂದ ಬದಲಾವಣೆಯ ಮಾತೇ ಇಲ್ಲ ಎಂದು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ.
ಹೀಗಿದ್ದರು ಸಿಎಂ ಬದಲಾಗುತ್ತಾರೆ ಎನ್ನೋದು ಸಾಧ್ಯವೇ ಇಲ್ಲ. ಯೋಗೇಶ್ವರ್ ಅವರ ಮಾತು ಯಾರಿಗೂ ಲೆಕ್ಕಕ್ಕಿಲ್ಲ ಎಂದರು.