ಸಿಪಿಎಲ್ 2020 – ಗೆಲುವಿಗಾಗಿ ನೈಟ್ ರೈಡರ್ಸ್ ಮತ್ತು ತಲಾವಾಹ್ಸ್ ನಡುವೆ ಜಿದ್ದಾಜಿದ್ದಿನ ಹೋರಾಟ
ಕೆರೆಬಿಯನ್ ಪ್ರೀಮಿಯರ್ ಲೀಗ್ನ ಆರನೇ ಪಂದ್ಯದಲ್ಲಿ ಗುರುವಾರ ಜಮೈಕಾ ತಲಾವಾಹ್ಸ್ ಮತ್ತು ಟ್ರಿಂಬಾಗೋ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಟ್ರಿನಿಡಾಡ್ ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡು ತಂಡಗಳು ಆತ್ಮವಿಶ್ವಾಸದಲ್ಲಿ ಬೀಗುತ್ತಿವೆ. ನೈಟ್ ರೈಡರ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದೆ. ಇನ್ನೊಂದೆಡೆ ಜಮೈಕಾ ತಲಾವಾಹ್ಸ್ ತಂಡ ಕೂಡ ಸೇಂಟ್ ಲೂಸಿಯಾ ಝೌಕ್ಸ್ ವಿರುದ್ಧ ಗೆಲುವು ದಾಖಲಿಸಿದೆ.
ಟೂರ್ನಿಯ ಬಲಿಷ್ಠ ತಂಡಗಳಾಗಿರುವ ನೈಟ್ ರೈಡರ್ಸ್ ಮತ್ತು ತಲಾವಾಹ್ಸ್ ನಡುವಿನ ಹೋರಾಟ ಅಭಿಮಾನಿಗಳಿಗೆ ರಸದೌತಣವನ್ನು ಉಣಬಡಿಸಲಿದೆ.
ನೈಟ್ ರೈಡರ್ಸ್ ತಂಡಕ್ಕೆ ಕಿರಾನ್ ಪೊಲಾರ್ಡ್ ಸಾರಥ್ಯ ವಹಿಸಿದ್ರೆ, ಜಮೈಕಾ ತಲಾವಾಹ್ಸ್ ತಂಡಕ್ಕೆ ರೊವ್ಮನ್ ಪಾವೆಲ್ ಸಾರಥಿಯಾಗಿದ್ದಾರೆ.
ಟ್ರಿಂಬಾಗೋ ನೈಟ್ ರೈಡರ್ಸ್ ಸಂಭವನೀಯ ತಂಡ
ಕಿರಾನ್ ಪೊಲಾರ್ಡ್ (ನಾಯಕ) ಸುನೀಲ್ ನರೇನ್, ಲೆಂಡ್ಲ್ ಸಿಮೋನ್ಸ್, ಕಾಲಿನ್ ಮುನ್ರೋ, ಟಿಮ್ ಸೆಲ್ಫರ್ಟ್, ಡರೆನ್ ಬ್ರೆವೋ, ಡಿಜೆ ಬ್ರೆವೋ, ಸಿಂಕದರ್ ರಾಝಾ, ಫಾವದ್ ಅಹಮ್ಮದ್, ಆಲಿ ಖಾನ್, ಜೈದೆನ್ ಸೀಲೆಸ್.
ಜಮೈಕಾ ತಲಾವಾಹ್ಸ್ ಸಂಭವನೀಯ ತಂಡ
ರೊವ್ಮನ್ ಪಾವೆಲ್ (ನಾಯಕ), ಚಾಡ್ವಿಕ್ ವಾಲ್ಟನ್, ಗ್ಲೇನ್ ಫಿಲಿಪ್ಸ್, ನಿಕೊಲಾಸ್ ಕಿರ್ಟನ್, ಆಂಡ್ರೆ ರಸೇಲ್, ಆಸೀಫ್ ಆಲಿ, ಕಾರ್ಲೊಸ್ ಬ್ರಾತ್ ವೆಟ್, ಮುಜೀಬ್ ಉರ್ ರಹಮಾನ್, ಸಂದೀಪ್ ಲಾಮಿಚ್ಚಾನ್, ವೀರಸ್ವಾಮಿ ಪೆರುಮಾಳ್, ಓಶಾನೆ ಥಾಮಸ್.