Crime: ಪ್ರೆಂಡ್ಸಿಶಿಪ್ ಗೂ ನೋ ಎಂದ ಯುವತಿ, No More 

1 min read
Crime Saaksha Tv

ಪ್ರೆಂಡ್ಸಿಶಿಪ್ ಗೂ ನೋ ಎಂದ ಯುವತಿ, No More

ಉತ್ತರ ಪ್ರದೇಶ: ಭಗ್ನ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿ ತನ್ನ ಪ್ರೀತಿ ಒಪ್ಪಿಕೊಳ್ಳಲಿಲ್ಲವೆಂದು ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯ ಭಮೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬರೇಲಿಯ ನಿವಾಸಿ ಪಿಯು ವಿದ್ಯಾರ್ಥಿನಿ ಶಿವಾನಿ ಮೃತ ದುರ್ದೈವಿ. ವಿಕಾಸ್ (19) ಕೊಲೆ ಆರೋಪಿ. ಈತನು ಯುವತಿಯನ್ನು ಕೊಲೆ ಮಾಡುವ ಮುಂಚೆ ಪೊಲೀಸರಿಗೆ ಕರೆ ಮಾಡಿ “ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಆಕೆ ಒಪ್ಪಲಿಲ್ಲವೆಂದರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಕರೆ ಮಾಡಿದ್ದಾನೆ.

ಮರುದಿನ ಬೆಳಿಗ್ಗೆ ಬರೇಲಿಯ ಹೊಂಡವೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಯುವತಿ ಶಿವಾನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಹೊಂಡಕ್ಕೆ ಬಿಸಾಡಲಾಗಿತ್ತು, ಎಂದು ಶಂಕಿಸಲಾಗಿದ್ದರು, ತನಿಕೆ ವೇಳೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ನಡೆದದ್ದೇನು? :  ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಕೆ ಆರಂಭಿಸಿದಾಗ ಮೊದಲಿಗೆ ಶಿವಾನಿ ಪೋನ್ ಕರೆಗಳನ್ನು ಪರಿಶೀಲಿಸಿದ್ದಾರೆ. ಶಿವಾನಿ ಕೊನೆಯದಾಗಿ ಅಜಯ್ ಎಂಬ ಯುವಕನೊಂದಿಗೆ ಮಾತನಾಡಿದ್ದಾಳೆ ಎಂದು ತಿಳಿದುಬಂದಿದೆ. ಕೂಡಲೇ ಪೊಲೀಸರು ಅಜಯ್ ನನ್ನು ವಿಚಾರಣೆಗೆ ಒಳಪಡಿಸಿದಾಗ, ಅಜಯ್ ಆ ಪೋನ್ ನಂದೇ ಆದರೆ ಪೋನ್ ಏಪ್ರೀಲ್ 4 ರಂದು ಕಳ್ಳತನವಾಗಿದೆ ಎಂದು ಹೇಳಿದ್ದಾನೆ.

Thief arrested Saaksha Tv

ಹಾಗಾದರೆ ಶಿವಾನಿ ಜೊತೆ ಮಾತನಾಡಿದ್ದು ಯಾರು? ಪ್ರಶ್ನೆ ಮೂಡಿದೆ. ನಂತರ ಪೊಲೀಸರಿಗೆ ಯುವತಿಯನ್ನು ಕೊಲೆ ಮಾಡುವುದಾಗಿ ಕರೆ ಬಂದಿರುವುದರ ಬಗ್ಗೆ ಅಜಯ್ ಗೆ ಕೇಳಿದಾಗ, ಅಸಲಿ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ. ಆ ಕರೆ ಮಾಡಿದ್ದು ನಾನಲ್ಲ, ಗ್ರಾಮದ ನಿವಾಸಿ ವಿಕಾಸ್ (19 ವರ್ಷ) ಎಂಬಾತನು ಎಂದು ಅಜಯ ಹೇಳಿದ್ದಾನೆ.

ನಂತರ ಪೊಲೀಸರು ವಿಕಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಲು ಬಯಸಿರುವುದಾಗಿ ತಿಳಿಸಿದ್ದಾನೆ. ಮೊದಲಿಗೆ ನಾನು ಅಜಯ್​ನ ಮೊಬೈಲ್ ಕದ್ದಿದ್ದೇನೆ. ಬಳಿಕ ಶಿವಾನಿ ಜೊತೆ ಸ್ನೇಹ ಬೆಳೆಸಲು ಮುಂದಾದೆ. ಬಳಿಕ ಆಕೆಗೆ ರಾಹುಲ್ ಎಂದು ಫೋನ್​ನಲ್ಲಿ ಮಾತನಾಡುತ್ತಿದ್ದೆ ಎಂದು ಹೇಳಿದ್ದಾನೆ.

ನಂತರ ಮಂಗಳವಾರ ತಡರಾತ್ರಿ ಆಕೆಯನ್ನು ಭೇಟಿಯಾಗಲು ನಿರ್ಜನ ಸ್ಥಳವೊಂದಕ್ಕೆ ಬರುವಂತೆ ಹೇಳಿದ್ದೆ. ಆಕೆ ಅಲ್ಲಿಗೆ ಬಂದಾಗ ನನ್ನ ನೋಡಿ ರಾಹುಲ್​ ಎಲ್ಲಿ ಎಂದು ಕೇಳಿದ್ದಳು. ಕೆಲವೇ ಸಮಯದಲ್ಲಿ ರಾಹುಲ್ ಬರುತ್ತಾನೆ ಎಂದು ಹೇಳಿದೆ. ಎಷ್ಟು ಹೊತ್ತಾದರೂ ರಾಹುಲ್ ಬಾರದೆ ಹಿನ್ನೆಲೆ ಶಿವಾನಿ ಮನೆಗೆ ಹೋಗಲು ಇಚ್ಛಿಸಿದಳು. ಈ ವೇಳೆ ನಾನು ಆಕೆಯ ಕೈ ಹಿಡಿದು ನನ್ನ ಪ್ರೀತಿ ವಿಷಯವನ್ನು ಪ್ರಸ್ತಾಪಿಸಿದೆ. ಆದರೆ ಆಕೆ ನಿರಾಕರಿಸಿದಳು ಎಂದು ವಿಕಾಸ್​ ಪೊಲೀಸರ ಮುಂದೆ ಹೇಳಿದ್ದಾನೆ.

ಅಷ್ಟೇ ಅಲ್ಲದೇ ತನ್ನ ಪ್ರೀತಿ ನಿರಾಕರಿಸಿದ ಬಳಿಕ ವಿಕಾಸ್​ ಆಕೆಗೆ ಇಬ್ಬರು ಫ್ರೆಂಡ್ಸ್​ ಆಗಿರೋಣ ಎಂದಿದ್ದಾನೆ. ಆದರೆ ಯುವತಿ ಇದಕ್ಕೂ ನಿರಾಕರಿಸಿದಲ್ಲದೇ ನಮ್ಮ ಕುಟುಂಬಸ್ಥರಿಗೆ ಹೇಳುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಇದರಿಂದ ಸಿಟ್ಟಿಗೆದ್ದ ವಿಕಾಸ್​ ದುಪ್ಪಟ್ಟಾದಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಶಿವಾನಿ ಮೃತದೇಹವನ್ನು ಅಲ್ಲೆ ಸಮೀಪದ ನೀರಿನ ಹೊಂಡದಲ್ಲಿ ಬಿಸಾಕಿ ಹೋಗಿದ್ದಾನೆ.

ಇಷ್ಟಕ್ಕೆ ಸುಮ್ಮನಾದ ಕ್ರೂರಿ ವಿಕಾಸ್,​ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿದ್ದಾನೆ. ಮನೆಯಲ್ಲಿ ಶಿವಾನಿ ಬದುಕಿದ್ದರೆ ನನ್ನ ಬಣ್ಣ ಬಯಲಾಗುತ್ತದೆ ಎಂಬುದು ಅರಿವಾಗಿದೆ. ಕೂಡಲೇ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಘಟನಾಸ್ಥಳಕ್ಕೆ ತೆರಳಿದ್ದಾನೆ. ಆಮೇಲೆ ವಿದ್ಯಾರ್ಥಿನಿ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಕೊಲೆ ಮಾಡಿರುವುದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಅಂತಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರವಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಘಟನೆ ಕುರಿತು ಭಮೋರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd