ನ.26ಕ್ಕೆ ಕ್ರೇಜಿ ಸ್ಟಾರ್ ನಟನೆಯ ದೃಶ್ಯ-2 ಸಿನಿಮಾದ ಟ್ರೈಲರ್
ಇದೇ ತಿಂಗಳ 26 ರಂದು ದೃಶ್ಯ 2 ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ.. ಏಳು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ದೃಶ್ಯ ಸಿನಿಮಾ ರವಿಚಂದ್ರನ್ ಕರಿಯರ್ ಗೆ ದೊಡ್ಡ ತಿರುವು ನೀಡಿತ್ತು. ಇದೀಗ ಆ ಸಿನಿಮಾದ ಸಿಕ್ವೇಲ್ ಕೂಡ ಸಿದ್ಧಗೊಂಡಿದೆ.
ದೃಶ್ಯ’ ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ರಾಜೇಂದ್ರ ಎಂಬ ಪಾತ್ರವಿತ್ತು. ಪತ್ನಿ ಸೀತಾ ಪಾತ್ರದಲ್ಲಿ ಮಲಯಾಳಂ ನಟಿ ನವ್ಯಾ ನಾಯರ್ ಇದ್ದರು. ಇನ್ನು, ಮಕ್ಕಳ ಪಾತ್ರದಲ್ಲಿ ಆರೋಹಿ ನಾರಾಯಣ್ ಮತ್ತು ಉನ್ನತಿ ನಟಿಸಿದ್ದರು. ಇದೀಗ ಆ ಕುಟುಂಬ ‘ದೃಶ್ಯ 2’ ಗಾಗಿ ಮತ್ತೆ ಏಳು ವರ್ಷಗಳ ಬಳಿಕ ಒಂದಾಗಿದೆ.
ದೃಶ್ಯ 1 ರಲ್ಲಿ ‘ಕ್ರೇಜಿ ಸ್ಟಾರ್’ ರವಿಚಂದ್ರನ್, ನವ್ಯಾ ನಾಯರ್ ಮುಖ್ಯಭೂಮಿಕೆಯಲ್ಲಿದ್ದರು. ಮೊದಲ ಭಾಗದ ಸಿನಿಮಾದಲ್ಲಿ ಇದ್ದ ಸಾಧು ಕೋಕಿಲ ಪಾತ್ರ ಇಲ್ಲಿಯೂ ಮುಂದುವರಿದಿದೆ. ಜೊತೆಗೆ ಯತಿರಾಜ್, ಪ್ರಮೋದ್ ಶೆಟ್ಟಿ, ಲಾಸ್ಯಾ ನಾಗರಾಜ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಭಾಗಕ್ಕೆ ಇಳೆಯರಾಜ ಸಂಗೀತ ನೀಡಿದ್ದರೆ, ‘ದೃಶ್ಯ 2’ಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.