ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಆರೋಪ bangalore saaksha tv
ಬೆಂಗಳೂರು : ಶ್ರೀ ಸಾಯಿ ಕಾಲೇಶ್ವರಿ ಇನ್ಕ್ಲೇವ್ ಕಂಪನಿ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ನಗರದ ಯಲಹಂಕ ವಲಯದ ಸಿಂಗನಾಯಕನಲ್ಲಿ ಹತ್ತಿರದ ಹೊನ್ನೆನಹಳ್ಳಿ ಗ್ರಾಮದಲ್ಲಿ ಶ್ರೀ ಸಾಯಿ ಕಾಲೇಶ್ವರಿ ಇನ್ಕ್ಲೇವ್ ಬಡಾವಣೆ ನಿರ್ಮಾಣವಾಗುತ್ತಿದೆ.
ಈ ಜಾಗ ಕೃಷಿ ವಲಯದಲ್ಲಿದ್ದರೂ, ಡಿ ಸಿ ಕನ್ವರ್ಶನ್ ಹಾಗಿದೆ ಎಂದು ಸುಳ್ಳು ಪತ್ರಗಳನ್ನು ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಕೇಳಿಬಂದಿದೆ..
ಪಂಚಾಯಿತಿಯಲ್ಲಿ ಅನುಮತಿ ಇಲ್ಲದಿದ್ದರೂ ಪಂಚಾಯತಿ ಯಿಂದ ಫ್ಲಾನ್ ಆಪ್ರೂವಲ್ ಹಾಗಿದೆ ಎಂದು ನಕಲಿ ಡಾಕ್ಯುಮೆಂಟ್ ಗಳನ್ನು ಸೃಷ್ಟಿ ಮಾಡಲಾಗಿದೆ.
ಅಲ್ಲದೇ ಪಿಡಿಒ ಸಹಿ ಹಾಗೂ ಸೀಲ್ ಅನ್ನು ನಕಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ಪಿಡಿಒ ಅಧಿಕಾರಿಗಳು ರಾಜನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಈಗಾಗಲೇ ಇಲ್ಲಿ ನಿವೇಶನ ಖರೀದಿ ಮಾಡಿರುವ ಗ್ರಾಹಕರು ಈ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.