ಗೆದ್ರೆ ಮಾತ್ರ ಸೌತ್ ಆಫ್ರಿಕಾಕ್ಕೆ ಚಾನ್ಸ್, ಇಂಗ್ಲೆಂಡ್ ಸೋತರೂ ಗಟ್ಟಿಯಾಗಿದೆ ನೆಟ್ ರನ್ರೇಟ್

1 min read

ಗೆದ್ರೆ ಮಾತ್ರ ಸೌತ್ ಆಫ್ರಿಕಾಕ್ಕೆ ಚಾನ್ಸ್, ಇಂಗ್ಲೆಂಡ್ ಸೋತರೂ ಗಟ್ಟಿಯಾಗಿದೆ ನೆಟ್ ರನ್ರೇಟ್

ಶಾರ್ಜಾದಲ್ಲಿ ಸೂಪರ್ 12ನ ಗ್ರೂಪ್ 1ರ ಕಟ್ಟಕಡೆಯ ಲೀಗ್ ಮ್ಯಾಚ್ ನಡೆಯಲಿದೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ದಕ್ಷಿಣ ಆಫ್ರಿಕಾಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಇಂಗ್ಲೆಂಡ್, ಸೋತರೂ ಗೆದ್ದರೂ ಹೆಚ್ಚು ಏಟು ಆಗುವ ಲಕ್ಷಣ ಕಾಣುತ್ತಿಲ್ಲ. ಅಷ್ಟರ ಮಟ್ಟಿಗೆ ಇಂಗ್ಲೆಂಡ್ ನೆಟ್ ರನ್ರೇಟ್ ಇದೆ. ಗ್ರೂಪ್ 1ರಲ್ಲಿ ಸೆಮಿಫೈನಲ್ಗೆ ಯಾವ ತಂಡ ಏರುತ್ತೆ ಅನ್ನೋದು ನಿರ್ಧಾರವಾಗಲಿದೆ. ಅಬುದಾಭಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ಸೋತರೆ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಪಂದ್ಯ ಗೆದ್ದರೆ ಸಾಕು ಸೆಮಿಫೈನಲ್ಗೇರಲಿದೆ. ಒಂದು ವೇಳೆ ಆಸ್ಟ್ರೇಲಿಯಾ ಗೆದ್ದರೆ ನೆಟ್ ರನ್ರೇಟ್ ಲೆಕ್ಕಕ್ಕೆ ಬರಲಿದೆ. ಹೀಗಾಗಿ ಇದು ಲೆಕ್ಕಾಚಾರದ ಪಂದ್ಯವಾಗಲಿದೆ.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಶಕ್ತಿ ವಿಭಿನ್ನವಾಗಿದೆ. ದಕ್ಷಿಣ ಆಫ್ರಿಕಾ ಕೇವಲ ಬೌಲಿಂಗ್ನಲ್ಲೇ ಹೆಚ್ಚು ಬಲವಾಗಿ ಕಂಡರೆ, ಇಂಗ್ಲೆಂಡ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಸಖತ್ ಆಗಿದೆ. ಜೋಸ್ ಬಟ್ಲರ್, ಜೇಸನ್ ರಾಯ್ ಅಬ್ಬರಿಸುತ್ತಿದ್ದಾರೆ. ಉಳಿದವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಬೌಲಿಂಗ್ನಲ್ಲಿ ಆದೀಲ್ ರಶೀದ್ ಜೊತೆಗೆ ಕ್ರಿಸ್ವೋಕ್ಸ್ ಮಿಂಚಿದ್ದಾರೆ. ನಾಲ್ಕಕ್ಕೆ ನಾಲ್ಕೂ ಪಂದ್ಯ ಗೆದ್ದಿರುವ ಇಂಗ್ಲೆಂಡ್ ಅಜೇಯ ತಂಡವಾಗಿ ಸೆಮಿಫೈನಲ್ಗೇರುವ ಲೆಕ್ಕಾಚಾರದಲ್ಲಿದೆ.

ಇನ್ನು ದಕ್ಷಿಣ ಆಫ್ರಿಕಾದ ಬೌಲಿಂಗ್ ಬಗ್ಗೆ ಮಾತಿಲ್ಲ. ಅನ್ರಿಚ್ ನೋರ್ಟ್ಜೆ, ಕಗಿಸೋ ರಬಾಡಾ, ಡ್ವೈನ್ ಪ್ರಿಟೋರಿಯಸ್ ಬ್ಯಾಟ್ಸ್ಮನ್ಗಳಿಗೆ ಆಘಾತ ನೀಡಿದ್ದಾರೆ. ಕೇಶವ್ ಮಹರಾಜ್ ಮತ್ತು ತಬ್ರೈಜ್ ಶಂಸಿ ಸ್ಪಿನ್ ಮೂಲಕ ಮ್ಯಾಜಿಕ್ ಮಾಡಿದ್ದಾರೆ. ಆದರೆ ಕ್ವಿಂಟನ್ ಡಿ ಕಾಕ್, ತೆಂಬ ಬವುಮಾ, ಏಡ್ರಿಯನ್ ಮಾರ್ಕ್ ರಾಂ ಸೇರಿದಂತೆ ಬ್ಯಾಟ್ಸ್ಮನ್ಗಳದ್ದೇ ಹೆಚ್ಚು ಚಿಂತೆ ಹರಿಣಗಳನ್ನು ಮಾಡುತ್ತಿದೆ. ಶಾರ್ಜಾ ಪಿಚ್ ಬಗ್ಗೆಯೂ ಎರಡೂ ತಂಡಗಳು ಗಮನ ಕೊಟ್ಟಿವೆ. ಸಂಜೆ ವೇಳೆ ಪಂದ್ಯ ನಡೆಯುವುದರಿಂದ ಡ್ಯೂ ಫ್ಯಾಕ್ಟರ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ ಲೆಕ್ಕಾಚಾರ ಏನು ಬೇಕಾದರೂ ಇರಬಹುದು. 5ಆದರೆ ಪಂದ್ಯ ಗೆಲ್ಲುವತ್ತ ಎರಡೂ ತಂಡಗಳು ರಣತಂತ್ರ ಮಾಡುತ್ತಿವೆ.

ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಟಾಲಿವುಡ್ ನಟ ಜ್ಯೂ. NTR

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd