ADVERTISEMENT
Thursday, August 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಯುಎಇನಲ್ಲಿ ಬದಲಾಗುತ್ತಿದೆ ಇತಿಹಾಸ, ಸೋತವರೆಲ್ಲ ಗೆಲ್ತಿದ್ದಾರೆ, ಗೆದ್ದವರೆಲ್ಲಾ ಸೋಲ್ತಿದ್ದಾರೆ..? ಟೀಮ್ ಇಂಡಿಯಾಕ್ಕೂ ಇತಿಹಾಸ ತಿರುಗಿಸುವ ಆಸೆ..!

Namratha Rao by Namratha Rao
October 26, 2021
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಯುಎಇನಲ್ಲಿ ಬದಲಾಗುತ್ತಿದೆ ಇತಿಹಾಸ, ಸೋತವರೆಲ್ಲ ಗೆಲ್ತಿದ್ದಾರೆ, ಗೆದ್ದವರೆಲ್ಲಾ ಸೋಲ್ತಿದ್ದಾರೆ..? ಟೀಮ್ ಇಂಡಿಯಾಕ್ಕೂ ಇತಿಹಾಸ ತಿರುಗಿಸುವ ಆಸೆ..!

ಟಿ20 ವಿಶ್ವಕಪ್ ನಲ್ಲಿ ಎಲ್ಲವೂ ಅದಲು ಬದಲಾಗುತ್ತಿದೆ. ಟಿ20ಯಲ್ಲಿ ಅಜೇಯ ದಾಖಲೆ ಹೊಂದಿದ್ದವರೆಲ್ಲ ಸೋಲಿನ ಕಹಿ ಉಂಡಿದ್ದಾರೆ. ಸೋತು ಸೋತು ಕಂಗಾಲಾಗಿದ್ದವರೆಲ್ಲ ಮೊದಲ ಗೆಲುವಿನ ರುಚಿ ಕಂಡಿದ್ದಾರೆ. ದುಬೈ, ಶಾರ್ಜಾ ಮತ್ತು ಅಬುದಾಭಿಗಳಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗುತ್ತಿದೆ. ಅಜೇಯ ದಾಖಲೆಗಳು ಪತನವಾಗಿ, ಸೋಲಿನ ಕೊಂಡಿಗಳು ಕಳಚಿಕೊಳ್ಳುತ್ತಿದೆ.

Related posts

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

August 20, 2026
ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

August 20, 2026

ಇಂಡಿಯಾ ವಿರುದ್ಧ ಗೆದ್ದ ಪಾಕ್..!
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಎಂದೂ ಸೋತೇ ಇರಲಿಲ್ಲ. 2007ರ ಫೈನಲ್ ಸೇರಿದಂತೆ ಒಟ್ಟು 5 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಮೇಲುಗೈ ಸಾಧಿಸಿತ್ತು. ಏಕದಿನ ವಿಶ್ವಕಪ್ ನಲ್ಲೂ ಟೀಮ್ ಇಂಡಿಯಾ ಇಲ್ಲಿ ತನಕ ಸೋತಿಲ್ಲ. ವಿಶ್ವಕಪ್ ನಲ್ಲಿ ಪಾಕ್ ಇಂಡಿಯಾ ವಿರುದ್ಧ ಸೋಲಲೆಂದೇ ಆಡುತ್ತೆ ಅನ್ನುವ ಮಾತು ಕೂಡ ಇತ್ತು. ಆದರೆ ಕಳೆದ ಭಾನುವಾರ ಈ ಅಜೇಯ ದಾಖಲೆ ಪತನವಾಗಿದೆ. ಪಾಕಿಸ್ತಾನದ ಸೋಲಿನ ಸರಪಳಿ ತುಂಡಾಗಿದೆ.

ಇಂಗ್ಲೆಂಡ್ ವಿರುದ್ಧ ಸೋತ ವೆಸ್ಟ್ ಇಂಡೀಸ್..!
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ಟಿ20 ವಿಶ್ವಕಪ್ ಪಂದ್ಯಗಳ ದಾಖಲೆ ವೆಸ್ಟ್ ಇಂಡೀಸ್ ಪರವಾಗೇ ಇತ್ತು. ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಆಡಿದ್ದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತ್ತು. 2016ರ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಅನ್ನು ಮಣಿಸಿತ್ತು. ಆದರೆ ಯುಎಇನಲ್ಲಿ ಈ ದಾಖಲೆ ಮುರಿದು ಹೋಗಿದೆ. ಶನಿವಾರ ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ ಮೊತ್ತ ಮೊದಲ ಬಾರಿಗೆ ಟಿ20 ವಿಶ್ವಕಪ್ ನಲ್ಲಿ ಸೋತಿದೆ.

ಲಕ್ನೋ, ಅಹ್ಮದಾಬಾದ್ ಹೊಸ ಐಪಿಎಲ್ ತಂಡಗಳು.

ಕಿವೀಸ್ ವಿರುದ್ಧ ಗೆಲ್ಲುತ್ತಾ ಟೀಮ್ ಇಂಡಿಯಾ..?
ಇದೊಂದು ಪ್ರಶ್ನೆ ಈಗ ಎದ್ದಿದೆ. ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಅಕ್ಟೋಬರ್ 31ರಂದು ಎದುರಿಸಲಿದೆ. ನ್ಯೂಜಿಲೆಂಡ್ ಟಿ20 ವಿಶ್ವಕಪ್ ನಲ್ಲಿ ಇಲ್ಲಿ ತನಕ ಟೀಮ್ ಇಂಡಿಯಾ ವಿರುದ್ಧ ಸೋತೇ ಇಲ್ಲ. ಆದರೆ ಈಗ ಟೀಮ್ ಇಂಡಿಯಾ ಇನ್ನೊಂದು ಪಂದ್ಯವನ್ನು ಕೂಡ ಸೋಲು ಹಾಗಿಲ್ಲ. ಗೆಲುವಿನ ಒತ್ತಡ ಕೂಡ ವಿರಾಟ್ ಬಳಗದ ಮೇಲಿದೆ. ಅಷ್ಟೇ ಅಲ್ಲ ಉಳಿದ ತಂಡಗಳ ಅಜೇಯ ದಾಖಲೆ ಪತನ ಆಗುತ್ತಿರುವುದರಿಂದ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಗೆಲ್ಲುತ್ತೆ ಅನ್ನುವ ವಿಶ್ವಾಸವಿದೆ. ಒಟ್ಟಿನಲ್ಲಿ ಯುಎಇನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಗಳು ಎಲ್ಲವನ್ನೂ ಉಲ್ಟಾಪಲ್ಟಾ ಮಾಡುತ್ತಿದೆ. ಬಹುಶಃ ಹೊಸ ಚಾಂಪಿಯನ್ ಹುಟ್ಟುವ ಎಲ್ಲಾ ಸಾಧ್ಯತೆಯೂ ಕಾಣುತ್ತಿದೆ.

ಅಫ್ಘಾನ್ ಮುಂದೆ 130 ರನ್ಗಳ ಸೋಲುಂಡ ಸ್ಕಾಟ್ ಲೆಂಡ್

ಪಾಕ್ VS ನ್ಯೂಜಿಲೆಂಡ್ ಮ್ಯಾಚ್ ಮೇಲೆ ಟೀಮ್ ಇಂಡಿಯಾ ಕಣ್ಣು

Tags: #saakshatvCricketDubaisharja stadiumT20World Cup
ShareTweetSendShare
Join us on:

Related Posts

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

ದೇಶವನ್ನು ಪ್ರೀತಿಸುವುದು ಅಂಧಭಕ್ತಿಯಾದರೆ ನಾನು ಅಂಧಭಕ್ತೆ: ನಟಿ ಇಶಾ ಕೊಪ್ಪಿಕರ್ ಖಡಕ್ ಪೋಸ್ಟ್

by Shwetha
August 20, 2026
0

ಮುಂಬೈ: ಕನ್ನಡದ 'ಸೂರ್ಯವಂಶ' ಸೇರಿದಂತೆ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಸಾಮಾಜಿಕ ಜಾಲತಾಣದ ವೀಡಿಯೊ ಮೂಲಕ ಭಾರಿ...

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

ಕ್ರಿಮಿನಾಶಕ ಸಿಂಪಡಿಸುವ ರೈತರ ಆರೋಗ್ಯಕ್ಕೆ ಅಪಾಯ? KIMS ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

by Shwetha
August 20, 2026
0

ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ರೈತರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS)...

ಇರಾನ್ ವಿರುದ್ಧ UAE ಕಠಿಣ ಕ್ರಮ; ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತ

ಇರಾನ್ ವಿರುದ್ಧ UAE ಕಠಿಣ ಕ್ರಮ; ಎಲ್ಲಾ ವ್ಯಾಪಾರ, ಹಣಕಾಸು ವಹಿವಾಟು ಸ್ಥಗಿತ

by Shwetha
August 20, 2026
0

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ನಡುವೆಯೇ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಇರಾನ್ ಜೊತೆಗಿನ ಎಲ್ಲಾ ವ್ಯಾಪಾರ, ವಾಣಿಜ್ಯ ವಿನಿಮಯ ಹಾಗೂ ಹಣಕಾಸು ವಹಿವಾಟುಗಳನ್ನು ಮುಂದಿನ ಸೂಚನೆ...

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

ಜ್ಞಾನೇಶ್ ಕುಮಾರ್ ಕರೆದೊಯ್ಯಿರಿ, ಇವಿಎಂ ಉಚಿತವಾಗಿ ಕಳಿಸುತ್ತೇವೆ: ಡೊನಾಲ್ಡ್ ಟ್ರಂಪ್‌ಗೆ ಕಾಂಗ್ರೆಸ್ ನೀಡಿದ ವಿಚಿತ್ರ ಆಫರ್

by Shwetha
August 20, 2026
0

ಹೊಸದೆಹಲಿ: ಭಾರತದ ಚುನಾವಣಾ ವ್ಯವಸ್ಥೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ತೀವ್ರವಾಗಿ...

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್  ತಿರುಗೇಟು

ನನ್ನ ಯೌವನ, ಬೆಡ್‌ರೂಮ್ ಬಗ್ಗೆ ಹಗಲುಗನಸು ಕಾಣಬೇಡಿ: ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

by Shwetha
August 20, 2026
0

ಹೊಸದೆಹಲಿ: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿನ್ ಝಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram