ಚಿಕ್ಕಮ್ಮನ ಜೊತೆ ಅನೈತಿಕ ಸಂಬಂಧ, ಮದುವೆಯಾದ್ಮೇಲು ಆಂಟಿ ಹಿಂದೆ ಬಿದ್ದ ಬರ್ಬರವಾಗಿ ಕೊಲೆಯಾದ..!
ಛತ್ತೀಸಗಢ: ಅನೈತಿಕ ಸಂಬಂಧ ಮನುಷ್ಯಯರ ಕೈಲಿ ಏನೆಲ್ಲಾ ಮಾಡಿಸುತ್ತೆ… ಅದರ ಪರಿಣಾಮ ಯಾವುದು ಒಳ್ಳೆಯದಾಗಿರೋದಿಲ್ಲ ಅನ್ನೋದಕ್ಕೆ ಛತ್ತೀಸ್ ಗಢದಲ್ಲಿ ನಡೆದಿರುವ ೀ ಘಟನೆ ಮತ್ತೊಂದು ಉದಾಹರಣೆ.. ಯುವಕನೋರ್ವ ಚಿಕ್ಕಮ್ಮನ ಜತೆಗೇ ಅನೈತಿಕ ಸಂಬಂಧ ಹೊಂದಿದ್ದ. ಬಳಿಕ ಮದುವೆಯಾದ ಮೇಲೂ ಚಿಕ್ಕಮ್ಮನ ಜೊತೆಗಿನ ಸಂಬಂಧ ಮುಂದುವರೆಸಲು ಹೋಗಿ ಕೊಲೆಯಾದ ಘಟನೆ ಛತ್ತೀಸಗಢದ ಜಸ್ಪುರ ಜಿಲ್ಲೆಯ ಖೂಂಟಿಯಲ್ಲಿ ನಡೆದಿದೆ.
ಮದುವೆಯಾಗದೇ ಮಗು ಕೊಟ್ಟ : ತಡರಾತ್ರಿ ಪ್ರೇಯಸಿ, ಆಕೆಯ ತಾಯಿಯನ್ನ ಕೊಂದ..!
ಸ್ಥಳೀಯ ಪತ್ರಕರ್ತರೊಬ್ಬರ ಮಗನಾಗಿದ್ದ 28 ವರ್ಷದ ಸಂಕೇತ್ ಮಿಶ್ರಾ ಎಂಬ ಯುವಕ ತನ್ನ ಚಿಕ್ಕಮ್ಮನ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಹಲವು ವರ್ಷ ಇವರ ಈ ಸಂಬಂಧ ಹೀಗೆಯೇ ಮುಂದುವರೆದಿತ್ತು. ನಂತರ ಯುವಕನ ಮದುವೆ ಬೇರೊಬ್ಬಳ ಜತೆ ನೆರವೇರಿತು. ತನ್ನ ಮದುವೆಯಾಗುತ್ತಿದ್ದಂತೆಯೇ ಆಂಟಿಯ ಜತೆ ದೂರವಾದ. ಇತ್ತ ಯುವಕ ತನ್ನಿಂದ ದೂರವಾಗುತ್ತಿದ್ದಂತೆಯೇ, ಚಿಕ್ಕಮ್ಮ ಬಿರ್ಸಾ ಮುಂಡಾ ಎಂಬಾತನ ಜತೆಗೆ ಸಂಪರ್ಕ ಬೆಳೆಸಿ ಆತನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ಲು.
ಜೀನ್ಸ್ ಧರಿಸಿದ್ರೆ ತಲಾಖ್ ಕೊಡ್ತೀನಿ ಎಂದ ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ..!
ಆದ್ರೆ ಆಂಟಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದನ್ನ ಸಂಕೇತ್ ಗೆ ಸಹಿಸಲು ಅಗಲಿಲ್ಲ. ಹೀಗಾಗಿ ಆಂಟಿ ಜೊತೆಗೆ ಜಗಳಕ್ಕೆ ನಿಂತಿದದ್ದ ಸಾಂಕೇತ್ ಆಕೆಯ ಮನೆಯಲ್ಲೇ ಉಳಿದಿದ್ದಾನೆ. ಇತ್ತ ಇವಬ್ಬರನ್ನು ನೋಡಿದ ಚಾಲಕನಿಗೂ ಕೋಪ ನೆತ್ತಿಗೇರಿದೆ. ಅದೇ ಕೋಪದಲ್ಲೇ ಇದ್ದ ಚಾಲಕ ಬಿರ್ಸಾ ಮತ್ತು ಸಂಕೇತ್ ನಡುವೆ ಒಂದು ದಿನ ದೊಡ್ಡ ಗಲಾಟೆ ನಡೆದಿದೆ. ಈ ವೇಳೆ ಬಿರ್ಸಾ ಅಲ್ಲಿಯೇ ಇದ್ದ ಚಾಕುವಿನಿಂದ ಸಂಕೇತ್ ನ ಕೊಲೆ ಮಾಡಿದ್ದಾನೆ. ಶವದ ಜತೆ ತನ್ನ ಬೈಕ್ ಮತ್ತು ಜಾಕೆಟ್ ಸುಟ್ಟುಹಾಕಿದ್ದಾನೆ. ಆದ್ರೆ ಈ ವಿಚಾರ ಹೇಗೋ ಪೊಲೀಸರಿಗೆ ಗೊತ್ತಾಗಿದೆ. ನಂತರ ಮೊಬೈಲ್ ಫೋನ್ ಕರೆಗಳನ್ನು ಪರಿಶೀಲನೆ ಮಾಡಿದಾಗ ಆಂಟಿಯ ಜತೆ ಮಾತನಾಡಿರುವ ವಿಷಯಗಳು ಗೊತ್ತಾಗಿವೆ. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಸದ್ಯ ಆಂಟಿ ಮತ್ತು ಚಾಲಕನನ್ನು ಬಂಧಿಸಲಾಗಿದೆ.
ಮನೆಯವರ ಒಪ್ಪಿಯಿಂದಲೇ ಮದುವೆಯಾಗಿದ್ದ ಪ್ರೇಮಿಗಳ ಬಾಳಲ್ಲಿ ವಿಧಿ ಚೆಲ್ಲಾಟ…!
ಒಟ್ಟಾರೆ ಮದುವೆಯಾಗಿ ಹೆಂಡತಿ ಜೊತೆಗೆ ಹಾಯಾಗಿ ಸಂಸಾರ ನಡೆಸಬೇಕಿದ್ದ ಯುವಕ ಅಕ್ರಮ ಸಂಬಂಧದ ಮೋಹಕ್ಕೆ ಬಿದ್ದು ಜೀವನ ಕಳೆದುಕೊಂಡಿದ್ದಾನೆ. ಇತ್ತ ಒಬ್ಬ ಹೋಗ್ತಿದ್ದಂತೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಬೆಳಸಿ ಯುವಕನ ಕೊಲೆಗೆ ಕಾರಣಳಾದ ಆಂಟಿ ತನ್ನ ಆಶಿಕ್ ಜೊತೆ ಜೈಲು ಸೇರಿದ್ದಾಳೆ. ಆದ್ರೆ ಇತ್ತೀಚೆಗೆ ಮದುವೆಯಾಗಿ ಗಂಡನ ಜೊತೆಗೆ ಸುಖ ಸಂಸಾರ ನಡೆಸಬೇಕು ಅಂತ ಕನಸು ಕಾಣ್ತಿದ್ದ ಸಾಂಕೇತ್ ಪತ್ನಿ ಏನೂ ತಪ್ಪಿಲ್ಲದೇ ಹೋದ್ರು ನೋವಲ್ಲಿ ದಿನಗಳೆಯುವಂತಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








