ಮನೆಗೆ ಕನ್ನ ಹಾಕಿ ಆಟೋ ಚಾಲಕನ ಜೊತೆಗೆ ಎಸ್ಕೇಪ್ ಆದಳು ಕೋಟ್ಯಾಧೀಶನ ಪತ್ನಿ..!
ಮಧ್ಯಪ್ರದೇಶ : ಕೋಟ್ಯಧಿಪತಿ ಉದ್ಯಮಿಯ ಪತ್ನಿಯೊಬ್ಬಳು ಮನೆಯಲ್ಲಿದ್ದ ಬದ್ದ ಹಣವನ್ನೆಲ್ಲಾ ದೋಚಿ ಆಟೋ ಚಾಲಕನೊಂದಿಗೆ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನ ಖಜ್ರಾನಾ ಪ್ರದೇಶದಲ್ಲಿ ನಡೆದಿದೆ. ಅಕೋಬರ್ 13ರಂದು ಈಕೆ ನಾಪತ್ತೆಯಾಗಿದ್ದ ಬಗ್ಗೆ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಆಕೆ ಮನೆಯಲ್ಲಿದ್ದ 47 ಲಕ್ಷ ರೂಪಾಯಿ ಹಣ ದೋಚಿ ತನಗಿಂತ 13 ವರ್ಷ ಚಿಕ್ಕ ವಯಸ್ಸಿನ ಆಟೋ ಚಾಲಕನೊಂದಿಗೆ ಪರಾರಿಯಾಗಿದ್ದಾಳೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದರು. ತನ್ನ ಪತ್ನಿಗೆ ಆಟೋ ಚಾಲಕ ಆಗಾಗ ಮನೆಗೆ ಡ್ರಾಪ್ ಮಾಡುತ್ತಿದ್ದ ಎಂದು ಪತಿ ಆರೋಪಿಸಿದ್ದು, ಅಕ್ಟೋಬರ್ 13ರಂದು ರಾತ್ರಿಯಾದರೂ ಮನೆಗೆ ಪತ್ನಿ ಬಾರದೇ ಇದ್ದಾಗ, ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಆಟೋಚಾಲಕ 32 ವರ್ಷದ ಇಮ್ರಾನ್ ಎಂದು ಗುರುತಿಸಲಾಗಿದ್ದು, ಮಹಿಳೆಗೆ 45 ವರ್ಷವಾಗಿದೆ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ಅಲ್ಲದೇ ಚಾಲಕ ಇಮ್ರಾನ್ ಸ್ನೇಹಿತರೊಬ್ಬರ ಮನೆಯಲ್ಲಿದ್ದ 33 ಲಕ್ಷ ರೂಪಾಯಿಯನ್ನು ಹಣವನ್ನು ವಶಪಡಿಸಿಕೊಂಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಮಹಿಳೆ ಹಾಗೂ ಚಾಲಕ 4 ನಗರಗಳಾದ ಖಾಂಡ್ವಾ, ಜವ್ರಾ, ಉಜ್ಜಯಿನಿ ಮತ್ತು ರತ್ಲಂಗಳಲ್ಲಿ ತಲೆಮರೆಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸ್ತಾಯಿದ್ದಾರೆ.