ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.
ಜಿಗಣಿ ಮೂಲದ ಆನಂದ ಬಂಧಿತ ಆರೋಪಿಯಾಗಿದ್ದಾರೆ. ಸಂಪಿಗೆ ರಸ್ತೆಯ ಪ್ರಶಾಂತಿ ಸ್ಯಾರಿ ಸೆಂಟರ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯಾಗಿದ್ದಾನೆ.. 5ನೇ ಮಹಡಿಯ ಗ್ರಿಲ್ ಮುರಿದು ಕಳ್ಳತನ ಮಾಡಿದ್ದ..
6.50 ಲಕ್ಷ ಹಣ ಕದ್ದೊಯ್ದಿದ್ದ .. ಕಳ್ಳತನದ ಬಳಿಕ ಎಸಿ ಡಕ್ ಮೂಲಕ ಎಸ್ಕೇಪ್ ಆಗಿದ್ದ. ಘಟನೆಗೆ ಸಂಬಂಧಿಸಿದಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು…
ಆರೋಪಿ ಆನಂದನ ಮೇಲೆ ಭಾರತೀನಗರ,ಜೆ ಬಿ ನಗರ,ಮೈಕೋಲೇಔಟ್ ಸೇರಿದಂತೆ ಮಂಡ್ಯ, ಶಿವಮೊಗ್ಗದ ಠಾಣೆಯಲ್ಲೂ ಪ್ರಕರಣ ಬೆಳಕಿಗೆ ಬಂದಿದೆ.. ಸದ್ಯ ಆರೋಪಿಯಿಂದ 5.8 ಲಕ್ಷ ರೂ ನಗದು ಹಣ ವಶಕ್ಕೆ ಪಡೆಯಲಾಗಿದೆ.