ಶಿಕ್ಷಕಿಗೆ ಪ್ರೀತಿಸುವಂತೆ ಕಾಟ ಕೊಡ್ತಿದ್ದ ಪಾಗಲ್ ಪ್ರೇಮಿ ಕೊನೆಗೆ ಮಾಡಿದ್ದೇನು ಗೊತ್ತಾ..!
ಉತ್ತರಪ್ರದೇಶ: ಪಾಗಲ್ ಪ್ರೇಮಿಯೊಬ್ಬ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನ ಹಲವು ದಿನಗಳಿಂದ ಪ್ರೀತಿಸುವಂತೆ ಟಾರ್ಚರ್ ಕೊಡ್ತಿದ್ದ. ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಹಿಂಬಾಲಿಸುತ್ತಿದ್ದ ಯುವಕ ಆಕೆಯನ್ನ ಪ್ರೇಮಿಸುವಂತೆ ಕಾಡುತ್ತಿದ್ದ ಎನ್ನಲಾಗಿದೆ. ಆದ್ರೆ ಆಕೆ ಪ್ರೀತಿಯನ್ನ ನಿರಕಾರಿಸಿದ್ದರಿಂದ , ಶಿಕ್ಷಕಿಗೆ ಗುಂಡು ಹಾರಿಸಿ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
OMG ಸ್ಟ್ರಾಬೆರಿ ಬಿರಿಯಾನಿ : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್..!
ಘಟನೆಯಲ್ಲಿ ಪಾಗಲ್ ಪ್ರೇಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದ್ದು, ಆಕೆಯನ್ನ ಶೂಟ್ ಮಾಡಿ ತಾನೂ ಶೂಟ್ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.