OMG ಸ್ಟ್ರಾಬೆರಿ ಬಿರಿಯಾನಿ : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್..!

1 min read

OMG ಸ್ಟ್ರಾಬೆರಿ ಬಿರಿಯಾನಿ : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್..!

ಸಾಮಾನ್ಯವಾಗಿ ಬಿರಿಯಾನಿ ಅಂದ ತಕ್ಷಣ ಬಾಯಲ್ಲಿ ನೀರೂರುತ್ತೆ. ಬಿರಿಯಾನಿ ಬಹುತೇಕ ಜನರ ಫೇವರೇಟ್ ಆಗಿರುತ್ತೆ. ಬಿರಿಯಾನಿಯಲ್ಲಿ ಅನೇಕ ಬಗೆಗಳು ಇವೆ. ಆದ್ರೆ ಸ್ಟ್ರಾಬೆರ್ರಿ ಬಿರಿಯಾನಿ ಬಗ್ಗೆ ಕೇಳಿದ್ದೀರಾ..

ಪಾಕಿಸ್ತಾನದ ವ್ಯಕ್ತಿಯೊಬ್ಬ ಬಿರಿಯಾನಿಗೆ ಸ್ಟ್ರಾಬೆರ್ರಿಗಳನ್ನ ಹಾಕೋ ಮೂಲಕ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾನೆ. ಸ್ಟ್ರಾಬೆರ್ರಿಯನ್ನ ಹಾಕಲಾದ ಈ ಬಿರಿಯಾನಿಗೆ ಸ್ಟ್ರಾಬೆರ್ರಿಯಾನಿ ಎಂದು ನಾಮಕರಣ ಕೂಡ ಮಾಡಿದ್ದಾರೆ. ಸ್ಟ್ರಾಬೆರಿ ಬಿರಿಯಾನಿನಾ. ಇಂತಹ ಬಿರಿಯಾನಿನೂ ಮಾಡಬಹುದಾ. ಇದೆಂಥಾ ಕಾಂಬಿನೇಷನ್ ಹೀಗೆಲ್ಲಾ ಪ್ರಶ್ನೆಗಳು ತಲೆಗೆ ಬರುತ್ತೆ.

3 ದಿನಗಳಲ್ಲಿ 200 ನಾಯಿಗಳು ಸಾವು : ಹೊಸ ಸೋಂಕು..?

ಈ ಹೊಸ ಹಾಗೂ ವಿಚಿತ್ರ ಬಿರಿಯಾನಿ ತಯಾರಿಸಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿರುವ ಮಾಡಿದ ವ್ಯಕ್ತಿಯನ್ನ ಇಸ್ಲಾಮಾಬಾದ್ನ ಸಾದ್ ಎಂದು ಗುರುತಿಸಲಾಗಿದೆ. ಒಂದು ದೊಡ್ಡ ಪಾತ್ರೆಯಲ್ಲಿ ಬಿರಿಯಾನಿ ತಯಾರಿಸಿರುವ ಸಾದ್ ಅದಕ್ಕೆ ಸ್ಟ್ರಾಬೆರ್ರಿಗಳಿಂದ ಅಲಂಕಾರ ಮಾಡಿದ್ದಾರೆ. ಆದರೆ ಬಿರಿಯಾನಿ ತಯಾರಿಸುವ ವೇಳೆ ಸ್ಟ್ರಾಬೆರ್ರಿ ಹಾಕಿದ್ದಾರಾ ಇಲ್ವಾ ಅನ್ನೋದಕ್ಕೆ ಇನ್ನೂವರೆಗೂ ಯಾವುದೇ ರೀತಿಯ ಸ್ಪಷ್ಟನೆ ಸಿಕ್ಕಿಲ್ಲ.

ಕೊಡಗು | ವ್ಯಾಘ್ರ ದಾಳಿಗೆ ಇಬ್ಬರು ಬಲಿ, ಹುಲಿ ಸೆರೆಗೆ ಬಂದ ಅಭಿಮನ್ಯು

ಫೋಟೋವನ್ನ ಟ್ವಿಟರ್ ನಲ್ಲಿ ಶೇರ್ ಮಾಡಿರುವ ಸಾದ್ ಈ ಸ್ಟ್ರಾಬಿರಿಯಾನಿಯನ್ನ ನಾವಿಂದು ಮನೆಯಲ್ಲಿ ತಯಾರಿಸಿದ್ದೇವೆ. ಇದಕ್ಕೆ ದೇಸಿ ಟ್ವೀಟಿಗರು ಏನು ಹೇಳ್ತಾರೆ ಎಂಬ ಕುತೂಹಲವಿದೆ ಎಂದು ಶೀರ್ಷಿಕೆ ನೀಡಿ ಟ್ವೀಟ್ ಮಾಡಿ ಬಿರಿಯಾನಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd