ಮಾಡೆಲಿಂಗ್​ ಕನಸು ಹೊತ್ತಿದ್ದ ಯುವತಿ ಆತ್ಮಹತ್ಯೆ : ಯುವತಿಯ ಬಾಯ್ ​ಫ್ರೆಂಡ್​ ಬಂಧನ..!

1 min read

ಮಾಡೆಲಿಂಗ್​ ಕನಸು ಹೊತ್ತಿದ್ದ ಯುವತಿ ಆತ್ಮಹತ್ಯೆ : ಯುವತಿಯ ಬಾಯ್ ​ಫ್ರೆಂಡ್​ ಬಂಧನ..!

ಮಂಗಳೂರು: ಮಂಗಳೂರಿನಲ್ಲಿ 20 ವರ್ಷದ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳೆದ್ದಿವೆ. ಸ್ಥಳೀಯರು ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪ ಮಾಡಿದ್ಧಾರೆ. ಯುವತಿ ಮಾಡೆಲ್ ಆಗಿದ್ದು, ಬೆಂಗಳೂರಿಗೆ ಫೋಟೋ ಶೂಟ್ ಗೆ ಹೋಗಲು ತಯಾರಿ ನಡೆಸಿದ್ದಳು. ಆದ್ರೆ ಅದೇ ದಿನವೇ ಆಕೆ ಸಾವಿನ ಕದ ತಟ್ಟಿದ್ದಾಳೆ.

ಚೀನಾ ಮೂಲದ ಉಪಕರಣಗಳನ್ನ ಭಾರತದಿಂದ ದೂರವಿರಿಸಲು ಕೇಂದ್ರದಿಂದ ಹೊಸ ನಿಯಮ ಜಾರಿ..!

ಮಂಗಳೂರು ಹೊರವಲಯದ ಕುಂಪಲ ಆಶ್ರಯ ಕಾಲನಿಯ ನಿವಾಸಿ ಚಿತ್ತಪ್ರಸಾದ್ ಎಂಬವರ ಮಗಳು ಪ್ರೇಕ್ಷಾ ಮೃತ ಯುವತಿಯಾಗಿದ್ದು, ಪ್ರಕರಣದ ಸಂಬಂಧ ಮೂವರು ಯುವಕರನ್ನು ಬಂಧಿಸಲಾಗಿದೆ. ಈಕೆ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಯತಿರಾಜ್ ಹೆಸರಿನ ಯುವಕನೊಂದಿಗೆ ಈ ಯುವತಿ ಪ್ರೀತಿಯಲ್ಲಿದ್ದಳು ಎನ್ನಲಾಗಿದೆ. ಈತ ಸ್ಥಳೀಯ ಕಾಂಗ್ರೆಸ್ ಮುಖಂಡನ ಮಗನಾಗಿದ್ದು, ಡ್ರಗ್ಸ್​ ವ್ಯಸನಿಯಾಗಿದ್ದ.  ಪ್ರೇಕ್ಷಾಳಿಗೆ ಮಾಡೆಲಿಂಗ್​ ಮಾಡದಿರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಆದ್ರೆ ಮಾಡೆಲಿಂಗ್ ಕನಸಿಗೆ ಎಳ್ಳು ನೀರು ಬಿಡುವುದಕ್ಕೆ ಯುವತಿಗೆ ಇಷ್ಟವಿರಲಿಲ್ಲ.  ಅಲ್ಲದೇ ಯುವತಿ ಸಾಯುವ ಕೆಲ ಗಂಟೆಗಳ ಮುನ್ನ ಈತ ತನ್ನ ಸ್ನೇಹಿತರಾದ ಸೌರವ್, ಭವಿತ್ ಎಂಬುವವರ ಜೊತೆಗೆ ಪ್ರೇಕ್ಷಾಳ ಮನೆ ಬಳಿ ಬಂದಿದ್ದನ್ನ ಸ್ಥಳೀಯರು ನೋಡಿದ್ದಾರೆ.

ದೀದಿ ಮೇಲಿನ ಹಲ್ಲೆ ಪ್ರಕರಣ: TMC ವ್ಯವಸ್ಥಿತ ನಾಟಕವೇ ಗೊತ್ತಾಗಬೇಕಿದೆ – ದಿಲೀಪ್ ಘೋಷ್  

ಬೆಂಗಳೂರಿಗೆ ಹೋಗುವ ಕುರಿತಾಗಿ ಪ್ರೇಕ್ಷಾ ಮತ್ತು ಯತಿರಾಜ್​ ನಡುವೆ ಜಗಳವಾಗಿದೆ ಎನ್ನಲಾಗಿದೆ. ಅದಾದ ನಂತರ ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಆದ್ರೆ ಇದು ಕೊಲೆಯೋ ಆತ್ಮಹತ್ಯೆಯೋ , ಸಾವಿಗೆ ಅಸಲಿ ಕಾರಣವೇನೆಂಬುದು ಸಂಪೂರ್ಣ ತನಿಖೆಯ ನಂತರವೇ ಗೊತ್ತಾಗಬೇಕಿದೆ.

ವಿಜಯ್ ಹಜಾರೆ ಟ್ರೋಫಿ | ಸೆಮಿಫೈನಲ್ ನಲ್ಲಿ ಎಡವಿದ ಕರ್ನಾಟಕ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd