ಹೊಸ ವರ್ಷದ ಮೋಜಿಗೆ ಹಣ ಕೇಳಿದ, ನಿರಾಕರಿಸಿದ್ದಕ್ಕೆ ಸುತ್ತಿಗೆಯಿಂದ ಅಜ್ಜಿ ತಲೆ ಹೊಡೆದ ಮೊಮ್ಮಗ..!
ನವದೆಹಲಿ: ನ್ಯೂಯಿಯರ್ ಬಂತು… ಮೋಜು ಮಸ್ತಿ ಮಾಡ್ಬೇಕು ಹಣ ಬೇಕು ಅಂತ ಕೇಳಿದ ಮೊಮ್ಮಗನಿಗೆ ಹಣ ಕೊಡಲು ನಿರಾಕರಿಸಿದ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ಬೇಳಕಿಗೆ ಬಂದಿದೆ.
73 ವರ್ಷದ ಸತೀಶ್ ಕುಮಾರಿ ಮೃತ ದುರ್ದೈವಿಯಾಗಿದ್ದಾರೆ. ಆಕೆಯ ತಲೆಗೆ ಮೊಮ್ಮಗ ಸುತ್ತಿಗೆಯಿಂದ ಬಲವಾಗಿ ಹೊಡೆದಿದ್ದ ಕಾರಣ ಕುರ್ಚಿಯಲ್ಲಿ ಕೂತಿದ್ದ ಜಾಗದಲ್ಲೇ ಪ್ರಾಣ ಬಿಟ್ಟಿದ್ದಾರೆ. ಶಾದಾರಾ ಪ್ರದೇಶದ ರೋಹ್ತಾಶ್ ನಗರದಲ್ಲಿನ ಮನೆಯ ಕೆಳ ಅಂತಸ್ತಿನಲ್ಲಿ ಸತೀಶ ಕುಮಾರಿ ವಾಸವಾಗಿದ್ದು, ಮೊದಲ ಅಂತಸ್ತಿನ ಮಹಡಿಯಲ್ಲಿ ಹಿರಿಯ ಪುತ್ರ ಹಾಗೂ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. 2ನೇ ಪುತ್ರ ಮನೋಜ್ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು.
ಪೆಪ್ಪರ್ ಸ್ಪ್ರೇ ಬಳಸಿ ತಾಯಿಯೇ ಮಗಳನ್ನು ಅಪಹರಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!
ಇಬ್ಬರೂ ಮಕ್ಕಳು ತಾಯಿ ಕಾಣಿಸದೇ ಇರೋದು ಹಾಗೂ ಮನೆ ಬಾಗಿಲೆಗೆ ಬೀಗ ಹಾಕಿದ್ದನ್ನ ಗಮನಿಸಿ ಬೀಗ ಒಡೆದು ಒಳನುಗ್ಗಿದಾ ಆಕೆ ಮೃತಪಟ್ಟಿದ್ದು ತಿಳಿದುಬಂದಿದೆ. ನಂತರ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಮಿಸಿದ ಪೊಲೀಸರು 19 ವರ್ಷದ ಮೊಮ್ಮಗ ಕರಣ್ ನನ್ನ ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿ ಕರಣ್ ಸತೀಶ್ ಕುಮಾರಿಯ ಹಿರಿಯ ಪುತ್ರ ಸಂಜಯ್ ಮಗ. ಸದ್ಯ ಕೊಲೆಗೆ ಉಪಯೋಗಿಸಿದ ಸುತ್ತಿಗೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel