ಅಕ್ರಮ ಸಂಬಂಧ : ಪ್ರಿಯಕರನ ಜೊತೆ ಸೇರಿ ಪತಿಯ ಕಥೆ ಮುಗಿಸಿದ ರಾಕ್ಷಸಿ..!
ಹರಿಯಾಣ : ಅಕ್ರಮ ಸಂಬಂಧಕ್ಕಾಗಿ ಹೆಮ್ಮಾರಿ ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆಮಾಡಿರುವ ಘಟನೆ ಹರಿಯಾಣದ ಯಮುನನಗರದ ಖಿಜ್ರಾಬಾದ್ ನಲ್ಲಿ ನಡೆದಿದೆ. 26 ವರ್ಷದ ಪತಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಈ ಮಹಿಳೆಗೆ ಪುಟ್ಟ ಮಗು ಕೂಡ ಇದೆ. ಈಕೆ 4 ವರ್ಷಗಳ ಹಿಂದೆ ವ್ಯಕ್ತಿಯೋರ್ವನನ್ನ ಮದುವೆಯಾಗಿದ್ದಳು. ಬಳಿಕ ಈಕೆ ಮತ್ತೊಬ್ಬನ ಜೊತೆಗೆ ಅನೈತಿಕ ಸಂಬಂಧವನ್ನ ಇಟ್ಟುಕೊಂಡಿದ್ದಳು. ಹೀಗಾಗಿ ಪ್ರೇಮಿಯ ಜೊತೆ ಸೇರಿ ಪತಿಯ ಕಥೆ ಮುಗಿಸಿದ್ದಾಳೆ ರಾಕ್ಷಸಿ.
ಭಿಕ್ಷುಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಪಾಪಿಗಳು..!
ಇನ್ನೂ ಪತಿಯನ್ನ ಕೊಂದು ಆತನ ಮೃತದೇಹವನ್ನ ಮನೆಯ ಒಳಗೆ ಹೂತು ಹಾಕಿದ್ದಾಳೆ. ನಂತರ ಪೊಲೀಸ್ ಠಾಣೆಯಲ್ಲಿ ಪತಿ ನಾಪತ್ತೆಯಾಗಿದ್ದಾನೆ ಎಂದು ಹೋಗಿ ದೂರು ನೀಡಿದ್ದಾಳೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇತ್ತ ಮೃತನ ಸಹೋದರಿಯು ಈಕೆಯ ವಿರುದ್ಧ ದೂರು ನೀಡಿದ್ದಳು. ಆಕೆಯ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಸತ್ಯಾಂಶವನ್ನ ತನಿಖೆಯಿಂದ ಬಯಲು ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.