ಆಕಸ್ಮಿಕವಾಗಿ ಗಿಡ ಕಿತ್ತ ಬಾಲಕಿಗೆ ಬೆಂಕಿ ಹಚ್ಚಿದ ಕಿಡಿಗೇಡಿ..!
ಮಕ್ಕಳು ಆಟವಾಡುವಾಗ ಅವರಿಂದ ಕೆಲ ತಪ್ಪುಗಳಾಗೋದು ಸಹಜ. ಆದ್ರೆ ಇಷ್ಟಕ್ಕೆ ಚಿಕ್ಕ ಮಕ್ಕಳು ಅಂತಾನೂ ನೋಡದೇ ಬೆಂಕಿ ಹಚ್ಚಿ ಕೊಲ್ಲೋ ಪ್ರಯತ್ನ ಯಾರೂ ಮಾಡೋದಿಲ್ಲ. ಆದ್ರೆ ಇಲ್ಲೊಬ್ಬ ಪಾಪಿ ಆಟ ಆಡುತ್ತಿದ್ದ ವೇಳೆ ಮನೆತಯಂಗಳದಲ್ಲಿದ್ದ ಗಿಡವೊಂದನ್ನು ಕಿತ್ತ ಕಾರಣಕ್ಕೆ 12 ವರ್ಷದ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿ ಕ್ರೂರತ್ವಮೆರೆದಿದ್ದಾನೆ.
ಇಂತಹದೊಂದು ಘಟನೆ ನಡೆದಿರೋದು ಬಿಹಾರದ ಬೇಗುಸರಾಯ್ ನ ಸಿವರಾಣ ಗ್ರಾಮದಲ್ಲಿ. ಸಿಖಂದರ್ ಯಾದವ್ ಎಂಬಾತ ಇಂತಹ ನೀಚ ಕೃತ್ಯವೆಸಗಿದ್ಧಾನೆ. 12 ವರ್ಷದ ಬಾಲಕಿಯೊಬ್ಬಳು ಆತನ ಮನೆ ಎದುರು ಆಟವಾಡುವ ವೇಳೆ ಆಕಸ್ಮಿಕವಾಗಿ ಗಿಡ ಒಂದನ್ನ ಕಿತ್ತುಹಾಕಿದ್ದಾಳೆ. ಇದನ್ನು ಗಮನಿಸಿದ ಸಿಖಂದರ್, ಆತನ ಪತ್ನಿ ಮತ್ತು ಆತನ ಮಗಳು ಸೇರಿ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾರೆ.
ನಂತರ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಖಂದರ್ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಪತ್ನಿಯನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗ್ತಿದೆ.
ನನ್ನನ್ನ ನಿಮ್ಮ ಮಗಳೆಂದುಕೊಂಡು ಪಾಸ್ ಮಾಡಿ ಪ್ಲೀಸ್.. ಪರೀಕ್ಷಾ ಪೇಪರ್ ನಲ್ಲಿ ವಿದ್ಯಾರ್ಥಿನಿ ಮನವಿ..!
74 ವರ್ಷದ ವೃದ್ಧನ ಹತ್ಯೆ ಪ್ರಕರಣ : ಮೂವರು ಬಿಜೆಪಿ ಕಾರ್ಯಕರ್ತರ ಬಂಧನ..!








