74 ವರ್ಷದ ವೃದ್ಧನ ಹತ್ಯೆ ಪ್ರಕರಣ : ಮೂವರು ಬಿಜೆಪಿ ಕಾರ್ಯಕರ್ತರ ಬಂಧನ..!

1 min read

74 ವರ್ಷದ ವೃದ್ಧನ ಹತ್ಯೆ ಪ್ರಕರಣ : ಮೂವರು ಬಿಜೆಪಿ ಕಾರ್ಯಕರ್ತರ ಬಂಧನ..!

ಪಶ್ಚಿಮ ಬಂಗಾಳ: 74 ವರ್ಷದ ವೃದ್ಧರೊಬ್ಬರ ಹತ್ಯೆ ಪ್ರಕರಣ ಸಂಬಂಧ ಮೂವರು ಬಿಜೆಪಿ ಕಾರ್ಯಕರ್ತರನ್ನ ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ಪುರ್ಬಾ ಬರ್ದಾಮನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಶುಕ್ರವಾರ ಸ್ಥಳೀಯ ಬಿಜೆಪಿ ಮುಖಂಡರನ್ನ ಬಂಧಿಸಲಾಗಿದ್ದು, ಶನಿವಾರ  ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.  ಮೂವರನ್ನೂ ಸಹ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿ  ನ್ಯಾಯಾಲಯ ತೀರ್ಪು ನೀಡಿದೆ.

ಮಾರ್ಚ್ 9 ರಂದು ರಾನಾ ಪೊಲೀಸ್ ಠಾಣೆ ಪ್ರದೇಶದ ಮನೆಯಲ್ಲಿ ವೃದ್ಧನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದ ದಿನ ವೃದ್ಧ ಬ್ಯಾಂಕ್ ನಿಂದ ಹಣ ವಿತ್ ಡ್ರಾ ಮಾಡಿಕೊಂಡು ಬಂದಿದ್ದು, ಅದನ್ನು ದೋಚುವ  ಪ್ರಯತ್ನ ನಡೆದಿದೆ. ಆದ್ರೆ ಈ ವೇಳೆ ವೃದ್ಧನಿಗೆ ಆಕಸ್ಮಿಕವಾಗಿ ಗುಂಡು ತಗಲಿದ್ದು, ಆತ ಮೃತಪಟ್ಟಿರೋದಾಗಿ ಆರೋಪಿಯೊಬ್ಬನು ಒಪ್ಪಿಕೊಂಡಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.

ಮಾಸ್ಕ್ ಧರಿಸುವಂತೆ ಹೇಳಿದ್ದೇ ತಪ್ಪಾ… ಮಾರ್ಷಲ್ ಜುಟ್ಟು ಹಿಡಿದು ಹೊಡೆದ ಮಹಿಳೆ..! VIDEO VIRAL  

ಆಸ್ಟ್ರೇಲಿಯಾದಲ್ಲಿ ರಣಭೀಕರ ಪ್ರವಾಹ  : ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ..!

8ನೇ ತರಗತಿ ಫೇಲಾದವನಿಂದ ಶಸ್ತ್ರಚಿಕಿತ್ಸೆ- ತಾಯಿ, ಮಗು ದುರ್ಮರಣ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd