ಮಾಸ್ಕ್ ಧರಿಸುವಂತೆ ಹೇಳಿದ್ದೇ ತಪ್ಪಾ… ಮಾರ್ಷಲ್ ಜುಟ್ಟು ಹಿಡಿದು ಹೊಡೆದ ಮಹಿಳೆ..! VIDEO VIRAL
ಮುಂಬೈ: ಸರ್ಕಾರದ ಆದೇಶದಂತೆ ಜನರ ಹಿತ ದೃಷ್ಟಿಯಿಂದ ಕೊರೊನಾ ವಾರಿಯರ್ಸ್ ಹಗಲು ರಾತ್ರಿ ಎನ್ನದೇ ಕೆಲಸ ಮಾಡ್ತಿದ್ದಾರೆ. ಇವರಲ್ಲಿ ಮಾರ್ಷಲ್ ಗಳು ಕೂಡ ಒಬ್ಬರು. ಅಲ್ಲಲ್ಲಿ ಮಾರ್ಷಲ್ ಗಳು ಮಾಸ್ಕ್ ಧರಿಸುವಂತೆ ಹೇಳುವುದಕ್ಕೆ ಸಾರ್ವಜನಿಕರು ಹಾಗೂ ಪೊಲೀಸರು ಮಾರ್ಷಲ್ ಗಳ ನಡುವೆ ಗಲಾಟೆಗಳು ನಡೆಯೋದು ಸಾಮಾನಯವಾಗಿ ಕಂಡು ಬರುತ್ತಿದೆ. ಆದ್ರೆ ಮುಂಬೈನಲ್ಲಿ ಮಹಿಳೆಯೊಬ್ಬಳ ಅತೀರೇಖದ ವರ್ತನೆಯ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.
ಹೌದು ಇತ್ತೀಚೆಗೆ ಮಹಿಳೆಯೊಬ್ಬಳು ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಹೊರಗೆ ಬಂದಿದ್ದಾಳೆ. ಇದನ್ನು ಗಮನಿಸಿದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಮಹಿಳಾ ಸಿಬ್ಬಂದಿ ಮಹಿಳೆಯನ್ನು ತಡೆದಿದ್ದಾರೆ. ಈ ವೇಳೆ ಮಹಿಳೆಯು ಮಾರ್ಷಲ್ ಗೆ ಕಪಾಳಕ್ಕೆ ಹೊಡೆದು ಕಾಲಲ್ಲಿ ಜಾಡಿಸಿ ಒದ್ದು, ಜುಟ್ಟು ಹಿಡಿದು ಹೊಡೆದು ಬಾಯಿಗೆ ಬಂದ ಹಾಗೆ ಬೈದು ಅವಮಾಸಿದ್ದಾಳೆ. ಮಹಿಳೆಯ ಈ ದುರ್ನಡತೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಕರ್ತವ್ಯನಿರತ ಸಿಬ್ಬಂದಿ ಮೇಲೆ ಕೈಮಾಡಿರುವುದಕ್ಕೆ ಆಕೆಯನ್ನ ಅರೆಸ್ಟ್ ಮಾಡಿ 10 ಪಟ್ಟು ಹೆಚ್ಚು ಫೈನ್ ವಸೂಲಿ ಮಾಡುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಈ ವೀಡಿಯೋ ಸೋಶಿಯಲ್ ವೈರಲ್ ಆಗ್ತಿದೆ.