ಶಾಕಿಂಗ್ : ಈಕೆ ತಾಯಿ ಪದಕ್ಕೆ ಕಳಂಕ..! ಅಪ್ರಾಪ್ತ ಮಗನ ಮೇಲೆ ಲೈಂಗಿಕ ದೌರ್ಜನ್ಯ..!
ಕೇರಳ: ನಾವು ಇದುವರೆಗೂ ಎಂಥೆಂಥಾ ಹೇಯ ಅತ್ಯಚಾರ ಪ್ರಕರಣಗಳ ಬಗ್ಗೆ ಕೇಳಿದ್ದೇವೆ. ಜನ್ಮ ಕೊಟ್ಟ ತಂದೆ ಮಗಳ ಮೇಲೆ ಅತ್ಯಚಾರ, ಮಗನ ಮೇಲೆ ಮಲತಾಯಿ ಅತ್ಯಚಾರ ಹೀಗೆಲ್ಲಾ ಸ್ಟೋರಿಗಳನ್ನ ಕೇಳಿದ್ದೇವೆ. ಆದ್ರೆ ಈ ಪ್ರಕರಣ ನೋಡಿದ್ರೆ ನಿಜಕ್ಕೂ ನಿಮಗೆ ಈ ಮಹಾತಾಯಿ ಮೇಲೆ ಸಿಟ್ಟು ನೆತ್ತಿಗೇರದೇ ಇರೋದಿಲ್ಲ. ಈಕೆ ತಾಯಿ ಪದಕ್ಕೆ ಅಪಮಾನ ತಂದಿಟ್ಟ ಪಾಪಿ.
ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಗೆ ಅಪ್ರಾಪ್ತ ಮಗ ಮಾಡಿದ್ದೇನು ನೋಡಿ..!
ಹೆತ್ತ ತಾಯಿ ಮಕ್ಕಳನ್ನ ಸಮಾಜದಿಂದ ಕಾಪಾಡುತ್ತಾಳೆ. ಎಂಥಹ ಕಷ್ಟ , ತೊಂದರೆ ಎದುರಾದ್ರೂ ಪ್ರಾಣ ಕೊಟ್ಟಾದ್ರೂ ಮಕ್ಕಳ ಕಾಪಾಡುತ್ತಾಳೆ. ಅಷ್ಟೇ ಯಾಕೆ ಸಮಯ ಬಂದ್ರೆ ಗಂಡನ ವಿರುದ್ಧವೂ ನಿಲ್ಲುತ್ತಾಳೆ. ಆದ್ರೆ ಇಲ್ಲೊಬ್ಬ ಪಾಪಿ ತಾಯಿ ಇದಕ್ಕೆ ಅಪವಾದವೆಂಬಂತಹ ಕೃತ್ಯವೊಂದನ್ನ ಎಸಗಿದ್ದಾಳೆ.
ಮದುವೆ ನಿಶ್ಚಯವಾಗಿದ್ದ ಮಧುಮಗಳಿಗೆ ಬಲವಂತವಾಗಿ ತಾಳಿಕಟ್ಟಿದ ಯುವಕ..!
ಕೇರಳದ ಕೊಲ್ಲಂ ಜಿಲ್ಲೆಯ 36 ವರ್ಷದ ಈ ಮಹಿಳೆ ತನ್ನ ಸ್ವಂತ ಅಪ್ರಾಪ್ತ ಮಗನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ. ಎರಡು ವಾರಗಳ ಹಿಂದೆ ಪತಿ ಮತ್ತು ಪುತ್ರ ದೂರು ನೀಡಿದ ಹಿನ್ನೆಲೆಯಲ್ಲಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಪೋಕ್ಸೋ ಕಾಯ್ದೆ ಅಡಿಯಲ್ಲಿ ಬಂಧಿತಳಾಗಿದ್ದಳು. ಆದ್ರೆ ಇದೀಗ ಈಕೆಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ, ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡುವಂತೆ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ತಜ್ಞರ ಸಮಿತಿ ಮಗುವಿನ ಮಾನಸಿಕ ಆರೋಗ್ಯ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಆರೋಪಿ ತಾಯಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸರಕಾರ ವಿರೋಧಿಸಿದ್ದು, ಮೊಬೈಲ್ ನಲ್ಲಿ ಮಹತ್ವದ ಸಾಕ್ಷ್ಯಗಳು ಪತ್ತೆಯಾಗಿದ್ದು, ಬಾಲಕನಿಗೆ ಸ್ಟಿರಾಯ್ಡ್ ಗಳನ್ನು ನೀಡಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿನಿಯ ಬೆತ್ತಲೆ ಪೋಟೋ ಬಳಸಿ, ಬ್ಲಾಕ್ ಮೇಲ್ – ಲವ್ ಜಿಹಾದ್ ಗೆ ಯತ್ನ : ಆರೋಪಿ ಬಂಧನ
ಇನ್ನೂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ತಾಯಿಯನ್ನೇ ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ. ಅಲ್ಲದೇ ತನ್ನ ಸ್ವಂತ ಮಗುವನ್ನೇ ಲೈಂಗಿಕವಾಗಿ ಶೋಷಿಸುತ್ತಿದ್ದ ಪ್ರಕರಣ ವ್ಯಾಪಕವಾಗಿ ಚರ್ಚೆಗೂ ಗ್ರಾಸವಾಗಿತ್ತು. ಆಕೆಯ ಬಂಧನಕ್ಕೆ ಪೊಲೀಸರು ಅನಗತ್ಯ ತರಾತುರಿ ಮಾಡಿದ್ದಾರೆ ಮತ್ತು ಸರಿಯಾದ ತನಿಖೆ ನಡೆಸಿಲ್ಲ ಎಂದು ಮಹಿಳೆಯ ಕುಟುಂಬ ನಂತರ ಆರೋಪಿಸಿದೆ. ಆಕೆಯ ಬಂಧನವನ್ನು ರಾಜ್ಯ ಮಹಿಳಾ ಆಯೋಗ ಮತ್ತು ಮಕ್ಕಳ ಕಲ್ಯಾಣ ಆಯೋಗ ಕೂಡ ಟೀಕಿಸಿತ್ತು. ಇದೀಗ ಪ್ರಕರಣ ತನಿಖಾ ಹಂತದಲ್ಲಿದ್ದು, ಮಹಿಳೆಗೆ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.
ಅತ್ತೆ ಸೊಸೆ ‘ಹೈಟೆಕ್’ ವಾರ್..! ಫೇಸ್ ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಸೊಸೆಗೆ ಹೀಗಾ ಮಾಡೋದು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel