ಮದ್ಯಕ್ಕೆ 10.ರೂ ಕೊಡದಕ್ಕೆ ಸ್ನೇಹಿತನನ್ನೇ ಬರ್ಬರವಾಗಿ ಕೊಂದ ಕಿಡಿಗೇಡಿಗಳು..!
ಮುಂಬೈ : ಎಣ್ಣೆ ಏಟಲ್ಲಿ ಸಾಕಷ್ಟು ಅನಾಹುತಗಳೇ ನಡೆದಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಇದೇ ರೀತಿಯಲ್ಲೇ ಮದ್ಯಕ್ಕೆ ಕೇವಲ 10 ರೂಪಾಯಿ ನೀಡದಕ್ಕೆ 50 ವರ್ಷದ ವ್ಯಕ್ತಿಯನ್ನ ಆತನ ಸ್ನೇಹಿತರೇ ಆದ ಇಬ್ಬರು ಕಿಡಿಗೇಡಿಗಳು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಡೆದಿದೆ. (50) ಭಗವತ್ ಸೀತಾರಾಮ್ ಫೇಸ್ ಮೃತದುರ್ದೈವಿಯಾಗಿದ್ದಾರೆ. ಆತನ ಇಬ್ಬರು ಸ್ನೇಹಿತರಾದ (40)ವಿನೋದ್ ಲಕ್ಷ್ಮಣ್ ವಾಂಖೆಡೆ ಮತ್ತು (35) ದಿಲೀಪ್ ತ್ರ್ಯಂಬಕ್ ಬೊಡ್ಡೆ ಕೊಲೆ ಆರೋಪಿಗಳಾಗಿದ್ದಾರೆ.
ಈ ಮೂವರೂ ಮದ್ಯದಂಗಡಿಗೆ ಕುಡಿಯಲು ಹೋಗಿದ್ದಾರೆ. ಅಲ್ಲಿ ಭಗವತ್ ಸೀತಾರಾ ಮ್ ಬಳಿ 10 ರೂ. ನೀಡುವಂತೆ ಕೇಳಿದ್ದಾರೆ. ಈ ವೇಳೆ ಭಗತ್ ಹಣ ನೀಡಲು ನಿರಾಕರಿಸಿದದ್ದಾನೆ. ಹೀಗಾಗಿ ಭಗವತ್ ಸೀತಾರಾಮ್ ಅಂಗಡಿಯಿಂದ ಹೊರಗೆ ಹೋಗುತ್ತಿದ್ದಂತೆಯೇ ಆತನ ತಲೆಗೆ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಭಗವತ್ ಸೀತಾರಾಮ್ ಪ್ರಜ್ಞೆತಪಿ ಕೆಳಗೆ ಬಿದ್ದು, ಸ್ಥಳದಲ್ಲಿಯೇ ಸಾವಪ್ಪಿದ್ದಾರೆ. ತಕ್ಷಣವೇ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇಬ್ಬರ ಮೇಲೂ ಕೊಲೆ ಕೇಸ್ ದಾಖಲಿಸಲಾಗಿದೆ.








