ಡಮ್ಮಿ ಬಾಂಬ್ ಮಾದರಿಗೆ ಬೆಚ್ಚಿ ಬಿದ್ದ ಕುಮಟಾ ಜನತೆ..
ಉತ್ತರಕನ್ನಡ ಜಿಲ್ಲೆಯ ಕುಮಾಟ ಪಟ್ಟಣದಲ್ಲಿ ಬಾಂಬ್ ಮಾದರಿಯ ವಸ್ತುವೊಂದು ಕಾಣಿಸಿಕೊಂಡು ಕುಮುಟ ಜನರ ಆತಂಕಕ್ಕೆ ಕಾರಣವಾಗಿರುವ ಘಟನೆ ಬುಧವಾರ ವರದಿಯಾಗಿದೆ.
ಕುಮುಟಾದ ವಿಧ್ಯಾದಿರಾಜ ಪಾಲಿಟೆಕ್ನಿಕ್ ಕಾಲೇಜ್ ಬಳಿಯ ಹಿಂಬದಿಯ ಪ್ರದೇಶದಲ್ಲಿ ಬಾಂಬ್ ಆಕೃತಿಯೊಂದು ವಾಯು ವಿಹಾರಕ್ಕೆ ತೆರಳಿದವರಿಗೆ ಕಾಣಿಸಿಕೊಂಡಿದೆ. ಆತಂಕಗೊಂಡ ಜನರು ತಕ್ಷಣ ಪೊಲೀಸರಿಗೆ ಪೋನ್ ಮಾಡಿ ತಿಳಿಸಿದ್ದಾರೆ. ತಕ್ಷಣ ಅಗ್ನಿಶಾಮಕ ದಳ ಮತ್ತು ಶ್ವಾನದಳ ಸ್ಥಳಕ್ಕೆ ಆಗಮಿಸಿ ಪ್ರದೇಶವನ್ನ ವಶಕ್ಕೆ ಪಡಿಸಿಕೊಂಡಿದ್ದವು. ಮಂಗಳೂರಿನಿಂದ ಬಾಂಬ್ ನಿಷ್ಕಕ್ರಿಯ ದಳ ಆಗಮಿಸಿ ಇದು ಹುಸಿ ಡಮ್ಮಿ ಬಾಂಬ್ ಎಂದು ತಿಳಿಸಿದ್ದಾರೆ.
ಕಾಲೇಜು ಪಕ್ಕದಲ್ಲಿಯೇ ರೈಲ್ವೇ ಹಳಿ ಇದ್ದದ್ದರಿಂದ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿದ್ದಾರೆ…ಇದು ವಿಧ್ವಂಸಕರ ಕೃತ್ಯವೊ ಅಥವಾ ಕಿಡಿಗೇಡಿಗಳ ಕೃತ್ಯವೋ ಎಂದು ತನಿಖೆ ಆರಂಭಿಸಿದ್ದಾರೆ. ಸಧ್ಯಕ್ಕೆ ಹುಸಿ ಬಾಂಬ್ ಎಂದು ತಿಳಿದ ನಂತರ ಕುಮುಟ ಜನತೆ ತುಸು ನಿರಾಳಗೊಂಡಿದ್ದಾರೆ.