ಹೆಂಡತಿಯ ಸಹೋದರಿಯ ಪ್ರೀತಿಗೆ ಬಿದ್ದು, ತುಂಬು ಗರ್ಭಿಣಿಯನ್ನೇ ಕೊಂದ ಪತಿ..!
ನವದೆಹಲಿ : ಮಾದಕ ದ್ರವ್ಯ ವೆಸನಿಯಾಗಿದ್ದ ಪತ್ನಿ ಜೈಲಿನಿಂದ ಹೆರಿಗಾಗಿ ಆಚೆ ಬಂದ ಬೆನ್ನಲ್ಲೇ ಆಕೆಯ ಪತಿ ಆಕೆಗೆ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದೆ. ಮಾದಕದ್ರವ್ಯ ವೆಸಗಿಯಾಗಿದ್ದ ಮಹಿಳೆ 8 ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆ ಆಕೆಯನ್ನ ಇತ್ತೀಚೆಗಷ್ಟೇ ಜೈಲಿನಿಂದ ಮನೆಗೆ ಕಳುಹಿಸಲಾಗಿದೆ.
ಆದ್ರೆ ಪತ್ನಿ ಜೈಲು ಸೇರಿದ್ದ ಗ್ಯಾಪ್ ಅಲ್ಲಿ ಪತಿ ಆಕೆಯ ಸಹೋದರಿಯ ಜೊತೆಗೆ ಸಂಬಂಧ ಬೆಳೆಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ರದ್ಧಾಂತೆ ನಡೆದಿದ್ದು, ಕಡೆಗೆ ಪತ್ನಿಗೆ ಗುಂಡಿಕ್ಕಿ ಕೊಂದಿದ್ದಾನೆ. ಘಟನೆಯಲ್ಲಿ ಸಂತ್ರಸ್ತೆ ಸಾವನಪ್ಪಿದ್ದಾಳೆ. ಪೊಲೀಸರು ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.