ಅಪರಿಚಿತ ಮಹಿಳೆಯೊಬ್ಬಳ ಕತ್ತು ಹಿಸುಕಿ ಆಕೆಯ ಕೊಲೆ ಮಾಡಿ ದುಷ್ಕರ್ಮಿಯೊಬ್ಬ ಪರಾರಿಯಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಭಾಗ ಹೊಸಕೋಟೆಯ ಸೂಲಿಬೆಲೆ ಗ್ರಾಮದಲ್ಲಿ ನಡೆದಿದೆ.. ಆರೋಪಿಯೆಂದು ಗುರುತಿಸಲಾಗಿರುವ ವ್ಯಕ್ತಿಯು ಅಕ್ರಮವಾಗಿ ಕೆಲ ದಿನಗಳಿಂದ ಮಹಿಳೆಯ ಜೊತೆಗೆ ತನ್ನ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ..
ಇತ್ತೀಚೆಗೆ ಇವರಿಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ..
ಇದಾದ ನಂತರ ಮಹಿಳೆಯ ಕೊಲೆ ನಡೆದಿದೆ.. ಇನ್ನೂವರೆಗೂ ಮೃತ ಮಹಿಳೆಯ ವಿಳಾಸ , ಹೆಸರು ಯಾವುದೂ ಪತ್ತೆಯಾಗಿಲ್ಲ.. ಸದ್ಯ ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಆರಂಭಿಸಿದ್ದಾರೆ.. ಅಂದ್ಹಾಗೆ ಅದೇ ಗ್ರಾಮದ ನರಸಿಂಹಮೂರ್ತಿ ಎಂಬುವವನ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ..