ಮತ್ತೊಬ್ಬನ ಜೊತೆಗೆ ಚಾಟ್ ಮಾಡ್ತಿದ್ದವಳಿಗೆ ಚಾಕು ಇರಿದ ಪ್ರಿಯಕರ..!
ಮೈಸೂರು : ಯುವತಿಯೊಬ್ಬಳು ಮತ್ತೊಬ್ಬ ಹುಡುಗನ ಜೊತೆಗೆ ಚಾಟ್ ಮಾಡುತ್ತಿದ್ದದ್ದನ್ನ ಗಮನಿಸಿ ಅನುಮಾನಗೊಂಡ ಆಕೆಯ ಪ್ರಿಯಕರ ಚಾಕುವಿನಿಂದ ಇರಿದಿರುವ ಘಟನೆ ನಂಜನಗೂಡಿನ ಶ್ರೀರಾಮಪುರದದಲ್ಲಿ ನಡೆದಿದೆ. ಈ ಸಂಬಮಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ಹಿನ್ನೆಲೆ
26 ವರ್ಷದ ಯುವತಿ ಗಾಯಾಳುವಾಗಿದ್ದು, ಆಕೆಯ ಪ್ರಿಯಕರ 28 ವರ್ಷದ ರಮೇಶ್ ಆರೋಪಿಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಯುವತಿ ಮೊಬೈಲ್ಗೆ ಬರುತ್ತಿದ್ದ ಮೆಸೆಜ್ಗಳನ್ನು ತನ್ನ ಮೊಬೈಲ್ಗೆ ಬರುವಂತೆ ರಮೇಶ್ ಮಾಡಿಕೊಂಡಿದ್ದ. ಯುವತಿ ಬೇರೆ ಯುವಕರೊಂದಿಗೆ ಚಾಟ್ ಮಾಡುತ್ತಿದ್ದುದನ್ನು ಕಂಡು ಆಕ್ರೋಶಗೊಂಡು ರಮೇಶ್ ನಿನ್ನೆ ಸಂಜೆ ನಗರದ ಶ್ರೀಹರ್ಷ ರಸ್ತೆಯಲ್ಲಿ ಪ್ರಿಯತಮೆಗೆ ಚಾಕುವಿನಿಂದ ಇರಿದಿದ್ದಾನೆ. ಸಾರ್ವಜನಿಕರು ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ರಮೇಶ್ನುನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಲಷ್ಕರ್ಠಾಚಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ವಿಚಾರಣೆಗೊಪಡಿಸಿದ್ದಾರೆ.