ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಯನ್ನ ಹಿಗ್ಗಾ ಮುಗ್ಗಾ ಥಳಿಸಿ ಕೊಂದ ಗ್ರಾಮಸ್ಥರು..!
ಉತ್ತರ ಪ್ರದೇಶ : ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಆರೋಪದ ಮೇಲೆ ಗ್ರಾಮಸ್ಥರ ವ್ಯಕ್ತಿಯೊಬ್ಬನನ್ನ ಹಿಗ್ಗಾಮುಗ್ಗ ಥಳಿಸಿದ್ದಾರಿ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆತ ಅರೆಸ್ಟ್ ಆಗಿ ಜೈಲಿಗೆ ಹೋದ ಮಾರನೇ ದಿನವೇ ಆತ ಜೈಲಿನಲ್ಲಿ ಪ್ರಾಣ ಬಿಟ್ಟಿದ್ದಾನೆ. ಇಂತಹ ಘಟನೆ ಉತ್ತರ ಪ್ರದೇಶದ ಕಾನ್ಪುರದ ಸಾಚೆಂಡಿ ಪ್ರದೇಶದಲ್ಲಿ ನಡೆದಿದೆ.
35 ವರ್ಷದ ಸುಬೋಧ್ ಭಾಜಪಾಯಿ ಎಂಬಾತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಯಾಗಿದ್ದು, ಜೈಲಿನಲ್ಲಿ ಮೃತಪಟ್ಟಿದ್ದಾನೆ. ಈತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ ಆಕೆಯನ್ನ ಸ್ಕಾರ್ಫ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡುವ ಪ್ರಯತ್ನವನ್ನೂ ಮಾಡಿದ್ದಾನೆ. ಆದ್ರೆ ಅಷ್ಟರಲ್ಲಿಯೇ ಅಲ್ಲಿಗೆ ಬಂದ ಗ್ರಾಮಸ್ಥರು ಅವನ್ನ ಎಳೆದೊಯ್ದು ತೀವ್ರವಾಗಿ ಥಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಆತನನ್ನ ಕರೆದೊಯ್ದಿದ್ದರು.
ಪ್ಯಾರೇ ದೇಶ್ ವಾಸಿಯೋ : 2020ರಲ್ಲಿ ದೇಶದ 10 ಸಾವಿರ ಕಂಪನಿಗಳ ಬಾಗಿಲು ಬಂದ್
ಆರೋಪಿ ಸುಬೋಧ್ ವಿವಾಹಿತನಾಗಿದ್ದ. ಈತನಿಗೆ 3 ಮಕ್ಕಳಿದ್ದರು. ಇನ್ನೂ ಪೊಲೀಸ್ ಠಾಣೆಗೆ ಕರೆದೊಯ್ಯುವ ಮುನ್ನ ಸುಬೋಧ್ ಗೆ ಪೊಲೀಸರು ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರು. ಆದ್ರೆ ವೈದ್ಯರು ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ಆಸ್ಪತ್ರೆಯಿಂದ ಜೈಲಿಗೆ ಕರೆದುಕೊಂಡು ಬಂದಾಗಲೂ ಸುಬೊಧ್ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಜೈಲಿನ ವೈದ್ಯರು ಸಹ ಸೂಚಿಸಿದ ಬಳಿಕವೇ ಆರೋಪಿಯನ್ನ ಸೆಲ್ ನಲ್ಲಿ ಇಡಲಾಗಿತ್ತು. ಆದ್ರೆ ಬೆಳಗಾಗುವುದರೊಳಗೆ ಆತ ಸಾವಿನಪ್ಪಿರೋದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮೀನು ವಿವಾದ : ಯಶ್ ತಾಯಿ ಜೊತೆಗೆ ಗ್ರಾಮಸ್ಥರ ಫೈಟ್..!
ಇನ್ನೂ ಆರೋಪಿ ಕುಟುಂಬಸ್ಥರು ಗ್ರಾಮಸ್ಥರ ವಿರುದ್ಧ ಹಾಗೂ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಸುಖಾಸುಮ್ಮನೆ ಆತನನ್ನ ಸಿಲುಕಿಸಿ ಥಳಿಸಲಾಗಿದೆ. ಅಲ್ಲದೇ ವೈದ್ಯರು ಕೂಡ ಸುಬೋಧ್ ನನ್ನ ಸರಿಯಾಗಿ ತಪಾಸಣೆ ನಡೆಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಸರಿಯಾದ ಚಿಕಿತ್ಸೆ ಇಲ್ಲದ ಕಾರಣ ಮೃತಪಟ್ಟಿರೋದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ ಬ್ರಿಟನ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಭಾರತ