ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ ಬ್ರಿಟನ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಭಾರತ

1 min read

ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ ಬ್ರಿಟನ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಭಾರತ

ಲಂಡನ್ : ಭಾರತದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಇದೀಗ ಇಡೀ ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ.  ಅದ್ರಂತೆ ಬ್ರಿಟನ್ ಕೂಡ ಈ ವಿಚಾರವನ್ನ ತಪ್ಪಾಗಿ ತೋರ್ಪಡಿಸುತ್ತಿದೆ. ಹೌದು ಹೊಸ ಕೃಷಿ ಕಾಯ್ದೆ ವಿರೋಸಿ ಭಾರತದಲ್ಲಿ ರೈತರು ನಡೆಸುತ್ತಿರುವ ರೈತ ಹೋರಾಟದ ಬಗ್ಗೆ ಬ್ರಿಟನ್ ಸಂಸದರು ಏಕಪಕ್ಷೀಯವಾಗಿ ಚರ್ಚೆ ನಡೆಸಿದ್ದಾರೆ. ಬ್ರಿಟನ್ ಸಂಸದರ ಈ ದುರ್ನಡತೆ ವಿರುದ್ಧ ಭಾರತ ಖಂಡನೆ ವ್ಯಕ್ತಪಡಿಸಿದೆ.

ಬ್ರಿಟನ್ ನ ಕೆಲ ಸಂಸದರು ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಸಿ ಅಲ್ಲಿ ಕೆಲ ತಪ್ಪು ಪ್ರತಿಪಾದನೆ ಮಾಡಿವೆ. ಆದ್ರೆ ಲಂಡನ್‍ ನಲ್ಲಿರುವ ಭಾರತೀಯ ಹೈ ಕಮಿಷನ್ ಇದನ್ನ ತೀವ್ರವಾಗಿ ಖಂಡಿಸಿದ್ದು, ಇಂತಹ ನಡವಳಿಕೆಗಳನ್ನು ಭಾರತ ಯಾವುದೇ ಕಾರಣಕ್ಕೂ ಸಹಿಸುವಿದಲ್ಲ ಎಂದು  ಬ್ರಿಟನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. britan saaksha tv.com

ಇನ್ನೂ ಭಾರತದಲ್ಲಿ ರೈತರು ನಡೆಸುತ್ತಿರುವ ಹೋರಾಟದ ಸ್ಥಳದಲ್ಲಿ ಸರ್ಕಾರ ಯಾವುದೇ ಬಲ ಪ್ರಯೋಗ ಮಾಡುತ್ತಿಲ್ಲ. ಆದರೂ ಬ್ರಿಟನ್ ನಲ್ಲಿ ಇದನ್ನ ವಿರುದ್ಧ ರೀತಿಯಲ್ಲಿ ಪ್ರಚಾರ ಮಾಡಲಾಗ್ತಿದೆ. ಅಲ್ಲದೇ ರೈತರ ಚಳವಳಿ ದೃಶ್ಯಗಳನ್ನು ಬಿತ್ತರಿಸಲು ಮಾಧ್ಯಮಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಬ್ರಿಟನ್ ಸಂಸದರ ಹೇಳಿಕೆಯಲ್ಲಿ ಯಾವುದೇ ಆರ್ಥವಿಲ್ಲ. ಸತ್ಯಾಸತ್ಯತೆ ತಿಳಿಯಬೇಕಾದರೆ ವಿದೇಶಿ ಹಾಗೂ ಬ್ರಿಟನ್ ಮಾಧ್ಯಮಗಳು ಭಾರತಕ್ಕೆ ತೆರಳಿ ಸತ್ಯಶೋಧನೆ ನಡೆಸಿ ನಂತರ ವರದಿ ಮಾಡಬೇಕು. ಅಜ್ಞಾತ ಸ್ಥಳದಲ್ಲಿ ಕುಳಿತು ಆರೋಪ ಮಾಡುವುದರಲ್ಲಿ ಯಾವುದೆ ಆರ್ಥವಿಲ್ಲ ಎಂದು ಕಮಿಷನ್ ಅಭಿಪ್ರಾಯಪಟ್ಟಿದೆ.farmers protest in india saaksha tv

ಹೋರಾಟ ನಡೆಸುತ್ತಿರುವ ರೈತ ಮುಖಂಡರನ್ನು ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ. ನಿಮ್ಮ ಕೆಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ಆದರೂ ರೈತರು ತಮ್ಮ ಹೋರಾಟ ಕೈಬಿಟ್ಟು ಮಾತುಕತೆಗೆ ಬರುತ್ತಿಲ್ಲ.

ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಭಾರತ ಬಿಡುವುದಿಲ್ಲ. ಹಿಂದಿನ ಕೆಲ ಕಾಯ್ದೆಗಳಿಗೆ ತಿದ್ದುಪಡಿ ತರುವುದಷ್ಟೆ ಭಾರತದ ಉದ್ದೇಶ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಆದರೂ ಭಾರತದ ಆಂತರಿಕ ವಿಚಾರದಲ್ಲಿ ಬ್ರಿಟನ್ ಮೂಗು ತೂರಿಸುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.

ಅವಳಿ ಮಗು ತಂದೆಯಿಂದ ಸಹೋದರಿಯ ರಕ್ಷಣೆಗೆ ಪ್ರಯತ್ನಿಸುತ್ತಿರುವ ಮುದ್ದಾದ ವಿಡಿಯೋ ವೈರಲ್..!

ಐಪಿಎಲ್ 2021- ಸನ್ ರೈಸರ್ಸ್ ಹೈದ್ರಬಾದ್ ತಂಡದ ವೇಳಾ ಪಟ್ಟಿ ಹೀಗಿದೆ.. ಕೆಕೆಆರ್ ವಿರುದ್ಧ ಮೊದಲ &ಕೊನೆಯ ಲೀಗ್ ಪಂದ್ಯ ಆಡಲಿರುವ ಎಸ್ ಆರ್ ಎಚ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd